ಭಾರತೀಯ ಜನತಾ ಪಕ್ಷ ಮೊದಲನೇ ಪಟ್ಟಿ ಬಿಡುಗಡೆಯಾದ ನಂತರ ಆಕ್ರೋಶ ಭುಗಿಲೆದ್ದಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ್ ಬೇನಕೆ ಅವರ ಟಿಕೆಟ್ ಕೈ ತಪ್ಪಿರುವುದರಿಂದಾಗಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಇಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಭಾರತೀಯ ಜನತಾ ಪಕ್ಷದ ನಾಯಕರುಗಳ ಹಾಗೂ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಅನಿಲ್ ಬೆನಕೆ ಅವರಿಗೆ ಅನ್ಯಾಯ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪಕ್ಷದ ನಾಯಕರಿಗೆ ದಿಕ್ಕಾರ ಕೂಗಿದರು.
ನಂತರ ಸಂಸದ ಮಂಗಳ ಸುರೇಶ್ ಅಂಗಡಿ ಅವರ ಕಾಲ್ನಡಿಗೆ ಮೂಲಕ ನಿವಾಸಕ್ಕೆ ಬಂದು ಕೆಲ ಹೊತ್ತು ಧರಣಿ ನಡೆಸಿದರು. ಸಂಸದೆ ಮಂಗಳಾಅಂಗಡಿ ಕಾರ್ಯಕರ್ತರನ್ನು ಸಮಾಧಾನ ಮಾಡುವಲ್ಲಿ ವಿಫಲರಾದರು.
ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷರಾದ ನಳಿನ್ ಕಟೀಲ್ ಅವರ ಜೊತೆ ದೂರವಾಣಿ ಮುಖಾಂತರ ಮಾತನಾಡ ಬೇಕೆಂದು ಒತ್ತಾಯಿಸಿದರು.
ಅವರ ಒತ್ತಾಯದವರಿಗೆ ರಾಜ್ಯಧ್ಯಕ್ಷರಿಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿದರು ಕೂಡ ದೂರವಾಣಿ ಸ್ವಿಚ್ ಆಫ್ ಆಗಿದ್ದು ಆದ್ದರಿಂದ ಸಾಯಂಕಾಲ ಮತ್ತೆ ದೂರವಾಣಿ ಕರೆ ಮಾಡಿ ಅನಿಲ್ ಬೆನಕೆ ಅವರಿಗೆ ನ್ಯಾಯ ದೊರಕಿಸುವ ಸಲುವಾಗಿ ಪ್ರಯತ್ನ ಮಾಡಲಾಗುವುದು ಎಂದು ಕಾರ್ಯಕರ್ತರಿಗೆ ಸಮಾಧಾನ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


