ಬೆಂಗಳೂರು: ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ನಂತರವೂ ರಘುನಾಥ್ ನಾಯ್ಡುಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೊದಲ ದಿನವೇ ಬಿ-ಫಾರಂ ನೀಡಿಲ್ಲ. ಕೆಲ ದಿನಗಳವರೆಗೆ ಕಾಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿ ರಘುನಾಥ್ ನಾಯ್ಡುಗೆ ಬಿ-ಫಾರಂ ನೀಡುವ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡೆ ಕುತೂಹಲ ಮೂಡಿಸಿದೆ. ರಘುನಾಥ್ ನಾಯ್ಡು ಇಂದು ಕೆಪಿಸಿಸಿ ಕಚೇರಿಗೆ ಬಿ-ಫಾರಂ ಪಡೆಯಲು ಆಗಮಿಸಿದ್ದರು, ಆದರೆ ಅವರಿಗೆ, ಕೆಲ ದಿನ ನಾಮಪತ್ರ ಹಾಕಬೇಡಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.
ವದಂತಿ ಬೆನ್ನಲ್ಲೆ ಬಿ-ಫಾರಂ ನೀಡದ ಬಗ್ಗೆ ಕುತೂಹಲ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೋರಿದ್ದಾರೆ. ಕೊನೆಗೂ ಬಿಫಾರಂ ಅನ್ನು ಇಂದು ನೀಡಿಲ್ಲ. ಹೀಗಾಗಿ ಬಿಫಾರಂ ಇಲ್ಲದೆ ಪದ್ಮನಾಭ ನಗರ ಕ್ಷೇತ್ರದ ಅಭ್ಯರ್ಥಿ ರಘುನಾಥ್ ನಾಯ್ಡು ಹೊರಟಿದ್ದಾರೆ.
ಈ ವೇಳೆ ಮಾತನಾಡಿದಂತ ರಘುನಾಥ್ ನಾಯ್ಡು, ಸಂಸದ ಡಿ.ಕೆ ಸುರೇಶ್ ಗೆ ತ್ಯಾಗ ಮಾಡುತ್ತೇನೆ. ಡಿ.ಕೆ ಸುರೇಶ್ ಸ್ಪರ್ಧಿಸಿದರೆ ನಾನೇ ಕ್ಷೇತ್ರ ಬಿಟ್ಟುಕೊಡ್ತೇನೆ. ಅವರು ಕ್ಷೇತ್ರಕ್ಕೆ ಬಂದರೆ 70 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇನೆ . ಇದನ್ನು ನಾನೇ ಡಿ.ಕೆ ಶಿವಕುಮಾರ್ ಮುಂದೆ ಹೇಳಿದ್ದೇನೆ. ಹೇಗೆ ಗೆಲ್ಲಸಬಹುದು ಅಂತ ಡಿ.ಕೆ ಶಿವಕುಮಾರ್ ಗೆ ವಿವರ ಕೊಟ್ಟಿದ್ದೇನೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


