ಬಾಗಲಕೋಟೆ: ಶಾಸನಗಳ ಗತವೈಭವ ತಿಳಿಯಲು ಮತ್ತು ನಾಡಿನ ಪರಂಪರೆಯನ್ನು ಅರಿಯಲು ಸಾಹಿತಿಗಳ ಸಂಶೋಧನೆ ಮತ್ತು ಗ್ರಂಥಗಳು ಅವಶ್ಯಕ. ಅವರ ಸಾಲಿನಲ್ಲಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಒಬ್ಬರಾಗಿದ್ದು ಅನೇಕ ಗ್ರಂಥಗಳ ಸಂಪಾದನೇ ಮತ್ತು ವಿಮರ್ಶೆಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಪೂಜ್ಯ ಶ್ರೀ ಪ್ರಭುಸ್ವಾಮಿ ಚರಂತಿಮಠ ಹೇಳಿದರು.
ನಗರದ ಬಿ.ವಿ.ವಿ ಸಂಘದ ನೂತನ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಅವರ ಗೌರವಾಭಿನಂದನೆ ಮತ್ತು ಅಂತರ್ಭುವಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಮರೇಗುದ್ದಿಯ ಅಡವಿಸಿದ್ಧೇಶ್ವರಮಠದ ಪೂಜ್ಯಶ್ರೀ ನಿರುಪಾಧೀಶ ಮಹಾಸ್ವಾಮಿಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುವೆಂಪು, ಬೇಂದ್ರೆ ಬಳಗದಂತೆ ಕಟಗಿಹಳ್ಳಿಮಠ ಅವರ ಶಿಷ್ಯಬಳಗವು ಅಪಾರವಾಗಿದೆ. ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕಾದರೆ ಶಿಕ್ಷಣ ಮತ್ತು ಶಿಕ್ಷಕರ ಪಾತ್ರದೊಡ್ಡದು. ಕಟಗಿಹಳ್ಳಿಮಠ ಅವರು ಸುಸಂಸ್ಕೃತ ಕುಟುಂಬ ಸಾಹಿತ್ಯ, ಸಂಗೀತ, ಮತ್ತು ಕಲೆಯನ್ನು ನಿರಂತರ ಪ್ರೊತ್ಸಾಹಿಸುತ್ತಾ ಬಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಖ್ಯಾಥಿತಿಯಾದ ಜಾನಪದ ವಿದ್ವಾಂಸ ಶ್ರೀರಾಮ ಇಟ್ಟಣ್ಣವರು ಮಾತನಾಡಿ ಡಾ. ವಿ.ಎಸ್. ಕಟಗಿಹಳ್ಳಿಮಠ ಅವರು ಲೇಖಕರಾಗಿ, ಪ್ರಾಚಾರ್ಯರಾಗಿ ಮಾದರಿ ಆಡಳಿತ ಮಾಡಿದ್ದು ಬರವಣಿಗೆಯಲ್ಲಿ ತಮ್ಮದೇಯಾದ ಬದ್ದತೆಯನ್ನು ಹೊಂದಿದ್ದಾರೆ. ಸ್ಥಳೀಯ ವಿದ್ಯಮಾನಗಳನ್ನು ಗುರುತಿಸಿ ಹಲವಾರು ಗ್ರಂಥಗಳನ್ನು ಸಂಪಾದನೆ ಮಾಡಿದ್ದಾರೆ ಎಂದರು.
ಕೇಂದ್ರೀಯ ವಿವಿ ಕುಲಸಚಿವರಾದ ಡಾ.ಬಸವರಾಜ ಡೋಣೂರ ಅವರು ಮಾತನಾಡಿ ಒಂದು ಸಂಸ್ಥೆ ಸಮಾಜದಲ್ಲಿ ಮಾದರಿ ಸಂಸ್ಥೆಯಾಗಬೇಕಾದರೆ ಅದರ ಹೊಣೆಗಾರನಿಗೆ ಮೇರು ವ್ಯಕ್ತಿತ್ವ ಮುಖ್ಯ ಅಂತಹ ಸಂಸ್ಕಾರಯುತ ವ್ಯಕ್ತಿತ್ವ ಪ್ರಾಚಾರ್ಯ ಡಾ.ವಿ.ಎಸ್. ಕಟಗಿಹಳ್ಳಿಮಠ ಅವರಲ್ಲಿದೆ. ವಯಸ್ಸು ಮನುಷ್ಯನನ್ನು ಪರಿಪಕ್ವನನ್ನಾಗಿಸುತ್ತದೆ ಅವರು ಸೃಜನಶೀಲ ಮತ್ತು ಸೌಜನ್ಯತೆಯಿಂದ ವೃತ್ತಿ, ಭಾಷೆ, ಸಾಹಿತ್ಯದಲ್ಲಿ ಅಪಾರ ಸಾಧನೆ ಮಾಡಿದ್ದು ಹೆಮ್ಮೆಯ ವಿಷಯ ಎಂದರು.
ನಂತರ ನಡೆದ “ಡಾ.ವಿಜಯಕುಮಾರ ಎಸ್ ಕಟಗಿಹಳ್ಳಿಮಠ ಅವರ ಸಾಹಿತ್ಯಎಂಬ ವಿಚಾರಗೋಷ್ಠಿಯಲ್ಲಿ ಧಾರವಾಡದ ಡಾ. ಡಿ ಜಿ ಹಾಜವಗೋಳ “ಸಂಶೋಧನ ಬರಹಗಳು, ನರೆಗಲ್ಲಿನ ಡಾ. ಕಲ್ಲಯ್ಯಾ ಎಸ್. ಹಿರೇಮಠ “ವಿಮರ್ಶಾ ಬರಹಗಳು” ಹಾಗೂ ಬಾಗಲಕೋಟೆಯ ಡಾ ಬಸವರಾಜ ಕುಂಬಾರ “ಸಂಪಾದನೆ ಕೃತಿಗಳ” ವಿಷಯದ ಮೇಲೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಎಸ್.ವಿ. ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಜಿ.ಸಿ. ತಲ್ಲೂರ, ಕನ್ನಡ ಪ್ರಾದ್ಯಾಪಕ ಡಾ. ರಾಜಶೇಖರ ಹಳೆಮನಿ, ವಿಶ್ರಾಂತಿ ಕುಲಪತಿ ಡಾ. ಎಮ್.ಆರ್. ಚಂದಾವರಕರ, ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಎನ್.ಅಥಣಿ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರು ಗುರುಬಸವ ಸೂಳಿಭಾವಿ, ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗಳ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಪ್ರೊ. ವ್ಹಿ. ಆರ್. ಶಿರೋಳ ಗೋಪಾಲ ಮರೆಗುದ್ದಿ, ಡಾ. ಬಿ.ಕೆ. ಹಿರೇಮಠ, ಡಾ. ಬಾಳಾಸಾಹೇಬ ಲೋಕಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಂತರ್ಭುವಿ ಗ್ರಂಥ ಲೋಕಾರ್ಪಣೆ: ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಪ್ರಾ. ಡಾ. ವ್ಹಿ.ಎಸ್. ಕಟಗಿಹಳ್ಳಿಮಠ ಅವರು ಮಾಡಿದ ಸಾಧನೆಯ ಕುರಿತ ಅಂತರ್ಭುವಿ ಗ್ರಂಥವನ್ನು ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಲೋಕಾರ್ಪಣೆ ಮಾಡಿದರು. ಕನ್ನಡ ಪ್ರಾದ್ಯಾಪಕ ಡಾ. ರಾಜಶೇಖರ ಹಳೆಮನಿ ಗ್ರಂಥ ಪರಿಚಯ ಮಾಡಿದರು. ಪತ್ರಿಕೋದ್ಯಮ ವಿಭಾಗದಿಂದ ನಿರ್ಮಿಸಲಾದ ಡಾ. ವಿ.ಎಸ್. ಕಟಗಿಹಳ್ಳಮಠ ಸಾಧನೆ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


