ತುರುವೇಕೆರೆ: ಶಾಸಕ ಮಸಾಲಾ ಜಯರಾಂ ರವರ ಸಮ್ಮುಖದಲ್ಲಿ ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದ ಯುವಕರುಗಳಾದ ಸುಜಯ್, ಮಂಜುನಾಥ್, ದೀಪು, ಸಿದ್ದುಶ್ರೀ, ಶಂಕರ, ಪ್ರಜ್ವಲ್ ರಾಮಡಿಹಳ್ಳಿ, ಮನು, ಮುಂತಾದ ಯುವಕರುಗಳು ಜೆಡಿಎಸ್ ತೊರೆದು ಮರಳಿ ಬಿ.ಜೆ.ಪಿ. ಪಕ್ಷವನ್ನು ಸೇರ್ಪಡೆಗೊಂಡರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮಸಾಲಾ ಜಯರಾಮ್, ಈ ಗ್ರಾಮದ ಯುವಕರು ಪಕ್ಷಕ್ಕೆ ಮರಳಿ ಬಂದಿರುವುದು ನಮಗೆ ಆನೆ ಬಲ ಬಂದಂತಾಗಿದೆ, ನಾನು ಒಂದು ವರ್ಷದಿಂದ ಅವರ ಸಂಪರ್ಕದಲ್ಲಿದ್ದೆ, ಈಗ ಕಾಲ ಕೂಡಿ ಬಂದಿದೆ. ಮಾತೃ ಪಕ್ಷಕ್ಕೆ ಮರಳಿದ್ದಾರೆ ಎಂದರು.
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ನಾವೆಲ್ಲಾ ಶ್ರಮ ವಹಿಸಿ ಕೆಲಸ ಮಾಡಬೇಕಿದೆ, ಅವಾಗ ಮಾತ್ರ ನಮಗೆ ಗೆಲುವು ಸಾಧ್ಯ. ನಮ್ಮ ಕಾರ್ಯಕರ್ತರಲ್ಲಿ ಚುನಾವಣಾ ಹುರುಪು ನನಗಿಂತ ಜಾಸ್ತಿಯಿದೆ, ಕಾರ್ಯಕರ್ತರು ಬಿಜೆಪಿಗೆ ವೋಟು ಹಾಕುವಂತೆ ಜನರ ಮನವೊಲಿಸಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷ ಕಿರಣ್, ಮುಖಂಡರಾದ ರಾಮಣ್ಣ, ರವಿ ಪಾಟೀಲ್, ಯುವಮೋರ್ಚಾದ ಬಸವೇಶ್, ಮನೋಹರ, ಸಿದ್ದಣ್ಣಯ್ಯ, ರೇಣುಕ ಸೇರಿದಂತೆ ಗ್ರಾಮಸ್ಥರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy