ವಿಜಯಪುರ: ಬಿಜೆಪಿ ನಿಮ್ಮನ್ನು ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇಷ್ಟೆಲ್ಲಾ ಅನುಭವಿಸಿ ಈಗ ಕಾಂಗ್ರೆಸ್‌ಗೆ ಹೋಗುತ್ತೀರಲ್ಲ ನಿಮಗೆ ಮಾನ, ಮರ್ಯಾದೆ, ಸ್ವಾಭಿಮಾನ ಇದೆಯಾ? ಎಸ್‌ಡಿಪಿಐ ಸಂಘಟನೆ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನಿಮಗೆ ನಾಚಿಕೆ ಆಗುತ್ತೋ ಇಲ್ವೋ ಎಂದು ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ದಲಿತರು, ಮುಸ್ಲಿಮರು, ಮರಾಠರು, ಬ್ರಾಹ್ಮಣರಿಗೆ ಸೇರಿದಂತೆ ಎಲ್ಲಾ ಸಮುದಾಯಗಳಿಗೆ ಅನುಕೂಲ ಕಲ್ಪಿಸಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮೋಸ ಮಾಡುವ ಯೋಜನೆ, ಪಿಎಫ್‌ಐನ ಸ್ವರೂಪವಾದ ಎಸ್‌ಡಿಪಿಐ ಜೊತೆಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ. 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಹುನ್ನಾರ ನಡೆದಿದೆ. 2047ಕ್ಕೆ ಭಾರತದ ಹಿಂದೂಗಳನ್ನು ಮತಾಂತರ ಮಾಡುವುದು, ನಿರ್ನಾಮ ಮಾಡುವುದು ಎಸ್‌ಡಿಪಿಐ ಕೆಲಸವಾಗಿದೆ. ಪಿಎಫ್‌ಐ ಸಂಘಟನೆಯು ಕರ್ನಾಟಕವನ್ನು ಇಸ್ಲಾಂ ರಾಜ್ಯವನ್ನಾಗಿಸುವ ಯೋಜನೆ ಹಾಕಿಕೊಂಡಿದೆ ಎಂದು ಕಿಡಿ ಕಾರಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


