ಉತ್ತರಾಖಂಡ್: ಹುಲಿ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಪೌರಿ ಗರ್ವಾಲ್ ಜಿಲ್ಲೆಯ ರಿಖಾ ನಿಖಾಲ್ ಮತ್ತು ಧುಮಾಕೋಟ್ ತಹಸಿಲ್ ನ ಹತ್ತಾರು ಹಳ್ಳಿಗಳಲ್ಲಿ ಬೆಳಗ್ಗೆ 6ಗಂಟೆಯಿಂದ ರಾತ್ರಿ 7ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸ ಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಏಪ್ರಿಲ್ 17 ಮತ್ತು 18ರಂದು ರಿಖಾನಿಖಾಲ್ ಮತ್ತು ಧುಮಾಕೋಟ್ ನ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲು ಪೌರಿ ಜಿಲ್ಲಾಧಿಕಾರಿ ಆಶೀಷ್ ಚೌಹಾಣ್ ಆದೇಶ ಜಾರಿಗೊಳಿಸಿದ್ದಾರೆ.
ಉತ್ತರಾಖಂಡ್ ನ ಪೌರಿ ಗರ್ವಾಲ್ ನ ನೈನಿದಂಡಾ ಪ್ರದೇಶದಲ್ಲಿ ಹುಲಿಯ ದಾಳಿಗೆ ಮೃತಗೊಂಡವರು ಶಾಲೆಯ ನಿವೃತ್ತ ಶಿಕ್ಷಕರು ಎಂದು ಗುರುತಿಸಲಾಗಿದೆ. ಅವರು ಸಾವನ್ನಪ್ಪಿದ ನಂತರ ಈ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಶೀಷ್ ಚೌಹಾಣ್ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


