ಬೇಸಿಗೆಯ ಬಿಸಿ ಹೆಚ್ಚಾದಂತೆ ಮಾನವ ಸೇರಿದಂತೆ ಪ್ರಾಣಿ, ಮತ್ತು ಪಕ್ಷಿಗಳು ಬಾಯಾರಿಕೆಯಿಂದ ಬಳಲುತ್ತಿದ್ದಾರೆ. ಮನುಷ್ಯರು ಬೇರೆಯವರೊಂದಿಗೆ ಬೇಡಿಯಾದರೂ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳಬಹುದು ಆದ್ರೆ, ಕಾಡು ಪ್ರಾಣಿಗಳು ಬಾಯಾರಿಕೆಯಿಂದ ಭೀಕರವಾಗಿ ಬಳಲುತ್ತಿರುತ್ತವೆ.
ಇದೀಗ ಬಾಯಾರಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ವ್ಯಕ್ತಿಯೊಬ್ಬ ಬಾಟಲಿಯ ಮೂಲಕ ನೀರುಣಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಕಾಡು ಪ್ರಾಣಿಗಳು ಹಾಗೂ ಮಾನವರ ನಡುವೆ ಆಗಾಗ ಸಂಘರ್ಷ ಏರ್ಪಡುತ್ತಿರುತ್ತವೆ. ಇದೀಗ ಅಂತಹುದೆ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಮರುಭೂಮಿಯಲ್ಲಿ ಬಾಯಾರಿದ ತೋಳಕ್ಕೆ ವ್ಯಕ್ತಿಯೊಬ್ಬ ನೀರು ಕುಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ವೀಡಿಯೊವನ್ನು Pier Pets ಎಂಬ ಟ್ಟಿಟರ್ ಖಾತೆ ಹಂಚಿಕೊಂಡಿದೆ.
ವ್ಯಕ್ತಿಯೊಬ್ಬ ಬಾಟಲಿಯಿಂದ ನೀರನ್ನು ತೋಳದ ಬಾಯಿಗೆ ಹಾಕುತ್ತಿರುವುದನ್ನು ಕಾಣಬಹುದು. ತೋಳ ಮನುಷ್ಯನನ್ನು ಕಂಡರೆ ಓಡುತ್ತದೆ. ಇಲ್ಲವೆ ಪ್ರಾಣ ರಕ್ಷಣೆಗೆ ದಾಳಿ ಮಾಡುತ್ತದೆ. ಆದ್ರೆ ಇಲ್ಲಿ ಮಾನವನನ್ನು ನಂಬಿ ತನ್ನ ದಾಹವನ್ನು ನೀಗಿಸಿಕೊಂಡಿದ್ದು ತುಂಬಾ ವಿಶೇಷವಾಗಿದೆ ಎಂದು ಹೇಳಬಹುದು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA