ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಾಜಿ ಸಚಿವ ಸೊಗಡು ಶಿವಣ್ಣ ಸಿದ್ಧರಾಗಿದ್ದು, ಬಿಜೆಪಿ ಟಿಕೆಟ್ ವಂಚಿತರಾದ ಬಳಿಕ ಇದೀಗ ಪಕ್ಷೇತರರಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ.
ಬಿಜೆಪಿ ಟಿಕೆಟ್ ಕೈ ತಪ್ಪಿದ ಬಳಿಕ ಎಚ್.ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದ ಸೊಗಡುಶಿವಣ್ಣ, ಜೆಡಿಎಸ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದರು. ಜೆಡಿಎಸ್ ಟಿಕೆಟ್ ಪಡೆಯುವ ಪ್ರಯತ್ನ ಫಲಪ್ರದವಾಗದ ಹಿನ್ನೆಲೆಯಲ್ಲಿ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ಅವರು ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.
ಈ ಸಂಬಂಧ ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣ, ಇವತ್ತಿಂದ ಹೊಸ ಅಧ್ಯಾಯ ಶುರು ಆಗ್ತಿದೆ. ನಾನು ಸ್ವಾಭಿಮಾನಿ, ಜೊತೆಯಲ್ಲಿರುವವರು ಕೂಡ ಸ್ವಾಭಿಮಾನಿಗಳು. ಎಲ್ಲರೂ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ನಾನು ಸ್ವತಂತ್ರ್ಯ ಅಭರ್ಥಿಯಾಗಿ ಸ್ಪರ್ಧೆ ಮಾಡ್ತೀನಿ. ಶಾಂತಿ ಮಂತ್ರ, ಸಮಾನತೆ ಮಂತ್ರ ಜಪಿಸ್ತೇನೆ. ಆಡಳಿತ ಭ್ರಷ್ಟಾಚಾರ ಮುಕ್ತವಾಗಿರಬೇಕು. ನಾನು ಇನ್ಮೇಲೆ ಮನೆ ಮನೆಗೆ ತೆರಳಿ ಮತ ಕೇಳ್ತೀನಿ ಎಂದರು.
ಎರಡು ಜೋಳಿಗೆ ಹಿಡಿದು ಹೋಗ್ತೀನಿ. ಹಿಂದೆ ಋಷಿ ಮುನಿಗಳು ಜೋಳಿಗೆ ಹಿಡಿದು ಮಠಮಾನ್ಯಗಳ ಅಭಿವೃದ್ದಿಗೆ ಹೋಗುತ್ತಿದ್ದರು. ನಾನು ಹಂಗೆ ಜೋಳಿಗೆ ಹಿಡಿದು ಹೋಗ್ತೀನಿ. ಒಂದು ವೋಟು, ಇನ್ನೊಂದು ನೋಟಿಗಾಗಿ ಜೋಳಿಗೆ ಹಾಕಿದ್ದೇನೆ. ನಾನು ಯಾವತ್ತು ಸ್ವಜನ ಪಕ್ಷಪಾತ ಮಾಡೋದಿಲ್ಲಾ. ಕರಪತ್ರಗಳನ್ನ ನಿಮ್ಮ ಮುಂದೆ ಬಿತ್ತರಿಸಿ ಮನೆ ಮನೆಗೂ ಕೊಡ್ತೀನಿ. ನನಗೆ ರಾಜಕಾರಣಿಗಳಲ್ಲಿ ನನ್ನ ಜೊತೆ ಇದ್ದವರು ದೇವೇಗೌಡರು, ಎಸ್.ಮಲ್ಲಿಕಾರ್ಜುನಯ್ಯ ಹೀಗೆ ಅನೇಕರು. ಎಲ್ಲರನ್ನೂ ಭೇಟಿ ಮಾಡ್ತೇನೆ, ಎಲ್ಲರೂ ಕರೀತಾರೆ. ಹೋರಾಟ ಮಾಡೋ ಶಕ್ತಿ ಹಕ್ಕು ಇದೆ ಎಂದರು.
ಸ್ವತಂತ್ರ್ಯ ಸಂಸದೆ ಮಂಡ್ಯದ ಸುಮಲತಾ ಮೋದಿಜೀ ಅಂತಾರೇ.
ಅವರು ಮೋದಿಯನ್ನ ಪ್ರಶ್ನೆ ಮಾಡ್ತಾರೆ. ಹಾಗೇ ನಾನು ಎಲ್ಲರನ್ನೂ ಪ್ರಶ್ನೆ ಮಾಡ್ತೀನಿ. ಸುಮಲತಾ ಅವರು ಮೋದಿ ಅವರ ಒಳ್ಳೇದನ್ನ ಒಳ್ಳೆದು, ಕೆಟ್ಟದನ್ನ ಕೆಟ್ಟದನ್ನು ಅಂತಾರೆ. ಆ ಶಕ್ತಿ ಸ್ವತಂತ್ರ್ಯ ಅಭ್ಯರ್ಥಿಗೆ ಇರುತ್ತೆ. ಭ್ರಷ್ಟಾಚಾರದ ವಿರುದ್ದ ನಾನು ಹೋರಾಟ ಮಾಡ್ತೀನಿ ಎಂದರು.
19972 ರಲ್ಲಿ ನನ್ನನ್ನ ಜೈಲಿಗೆ ಹಾಕಿಸಿದಂತಹ ವ್ಯಕ್ತಿಗಳನ್ನ ತಾಳ್ಮೆಯಿಂದ ಸಹಿಸಿಕೊಂಡಿದ್ದೇನೆ. ಅಪ್ಪ ಮಗ ಬಂದ ಮೇಲೆ ಯಾಕೆ ಭ್ರಷ್ಟಾಚಾರ, ಬೇನಾಮಿ ನಡೀತಿದೆ. ಕೊಡದಲ್ಲಿ ನೀರು ತುಂಬಿದ ಮೇಲೆ ಅದನ್ನ ಚೆಲ್ಲಲ್ಲೇಬೇಕು. ನಾನು ಮುಂದೆ ಮಾಡಬೇಕಿರೋ ಕೆಲಸ ಬೇಕಾದಷ್ಟು ಇದೆ. ಎಲ್ಲಾ ಪಾರ್ಟಿಯವರು ನನ್ನ ಜೊತೆ ಇದ್ದಾರೆ ಎಂದು ಅವರು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


