ನವದೆಹಲಿ : ಇಂದು ಏಪ್ರಿಲ್ 19 ರಂದು ಬೆಳಿಗ್ಗೆ 7 ಗಂಟೆಗೆ ನಿರುಪಯುಕ್ತ ಉಪಗ್ರಹವೊಂದು ಬಾಹ್ಯಾಕಾಶದಿಂದ ಭೂಮಿಯ ಮೇಲೆ ಬೀಳಲಿದೆ ಎಂದು ನಾಸಾ ಎಚ್ಚರಿಕೆ ನೀಡಿದೆ. ಈ ಉಪಗ್ರಹವನ್ನು 21 ವರ್ಷಗಳ ಹಿಂದೆ ಫೆಬ್ರವರಿ 2002ರಂದು ಉಡಾವಣೆ ಮಾಡಿತು ಇದರ ಹೆಸರು RHESSI ಸ್ಪೇಸ್‌ಕ್ರಾಫ್ಟ್.
ಇದು ಪತನದ ಸಮಯ ಮತ್ತು ಮಾರ್ಗವನ್ನು ನಿಖರವಾಗಿ ಹೇಳಲು ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ ಅದರಂತೆ ಬೆಳಿಗ್ಗೆ ಏಳು ಗಂಟೆಯಿಂದ 16 ಗಂಟೆಗಳ ಮೊದಲು ಅಥವಾ 16 ಗಂಟೆಗಳ ನಂತರ ಯಾವುದೇ ಸಮಯದಲ್ಲಿ ಭೂಮಿಯ ಮೇಲೆ ಬೀಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಮುದ್ರದಲ್ಲಿ ಬಿದ್ದರೆ ತೊಂದರೆ ಆಗುವುದಿಲ್ಲ. ಆದರೆ 273 ಕೆಜಿ ತೂಕವಿರುವ ಈ ಉಪಗ್ರಹ ವಸತಿ ಪ್ರದೇಶದಲ್ಲಿ ಬಿದ್ದರೆ, ಸಾಕಷ್ಟು ತೊಂದರೆ ಉಂಟಾಗಬಹುದು. ಹಾಗು ಈ ಉಪಗ್ರಹದ ಹೆಚ್ಚಿನ ಭಾಗವು ವಾತಾವರಣಕ್ಕೆ ಬರುವಾಗ ಸುಟ್ಟು ಹೋಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಚ್ಚರ, ಭೂಮಿಗೆ ಅಪ್ಪಳಿಸಲಿದೆ 273 ಕೆಜಿ ತೂಕದ ಬೃಹತ್ ‘ಉಪಗ್ರಹ’, ಆಪತ್ತು ತಪ್ಪಿದ್ದಲ್ಲ ಎಂದು ನಾಸಾ ಎಚ್ಚರಿಕೆ ಕೊಟ್ಟಿದೆ
ರೆಸಿ ಬಾಹ್ಯಾಕಾಶ ನೌಕೆಯ ಪೂರ್ಣ ಹೆಸರು ರೆವೆನ್ ರಾಮಟಿ ಹೈ ಎನರ್ಜಿ ಸೋಲಾರ್ ಸ್ಪೆಕ್ಟ್ರೋಸ್ಕೋಪಿಕ್ ಇಮೇಜರ್. ಇದು ತುಂಬಾ ದೊಡ್ಡ ಉಪಗ್ರಹವಲ್ಲ. ಆದರೆ ಬಾಹ್ಯಾಕಾಶದಿಂದ ಬರುವ ಸಣ್ಣ ವಸ್ತು ಕೂಡ ದೊಡ್ಡ ಹಾನಿಯನ್ನು ಉಂಟು ಮಾಡುತ್ತದೆ. ಏಕೆಂದರೆ ಈ ಉಪಗ್ರಹದ ಕೆಲವು ಭಾಗಗಳು ಭೂಮಿಯ ಮೇಲೆ ಬೀಳುತ್ತವೆ ಎಂದು ನಾಸಾ ಹೇಳಿದೆ. ರೆಸಿ ಬಾಹ್ಯಾಕಾಶ ನೌಕೆಯಿಂದ ಭೂಮಿ ಅಪಾಯದಲ್ಲಿದೆ ಎಂಬುದನ್ನು ನೆನಪಿಸುತ್ತದೆ.
ಬಾಹ್ಯಾಕಾಶದಲ್ಲಿ ಹೆಚ್ಚಿನ ಉಪಗ್ರಹಗಳಿಂದ ಅವುಗಳ ನಡುವಿನ ಘರ್ಷಣೆಯೂ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಭೂಮಿಯ ಮೇಲೆ ತ್ಯಾಜ್ಯ ಬರುವ ಅಪಾಯ ಹೆಚ್ಚಾಗುತ್ತದೆ. ಸದ್ಯ 30 ಸಾವಿರಕ್ಕೂ ಹೆಚ್ಚು ತ್ಯಾಜ್ಯದ ರಾಶಿ ಭೂಮಿಯ ಸುತ್ತ ಸುತ್ತುತ್ತಿದೆ ಎಂದು ಹೇಳಬಹುದು.
ಯುರೋಪಿಯನ್ ಸ್ಪೇಸ್ ಪ್ರಕಾರ, ಒಂದು ಮಿಲಿಯನ್ ವಸ್ತುಗಳು ಬಾಹ್ಯಾಕಾಶದಲ್ಲಿ ಭೂಮಿಯ ಸುತ್ತ ಚಲಿಸುತ್ತಿರುತ್ತವೆ. ಆದರೆ ಈ ಸಣ್ಣ ತುಣುಕುಗಳು ನಮ್ಮ ಉಪಗ್ರಹಗಳನ್ನು ಸ್ಫೋಟಿಸಬಹುದು. ಅವುಗಳನ್ನ ಹಾಳುಮಾಡಬಹುದು ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


