ದಿನದಿಂದ ದಿನಕ್ಕೆ ಬಿಸಿ ಗಾಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಅಧಿಕ ತಾಪಮಾನ ಜನತೆಯನ್ನು ತುಂಬಾ ಬಾಧಿಸುತ್ತಿದೆ. ತೆಲಂಗಾಣದ ಅದಿಲಾಬಾದ್‌ನ ಜಂಟಿ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಂದು ಉಟ್ನೂರು ಮಂಡಲದ ಪುಲಿಮಡುಗಿನಲ್ಲಿ ಒಬ್ಬರು ಮತ್ತು ಕೊಮಾರಂಭಿಂ ಜಿಲ್ಲೆಯ ಕಗಜನಗರದಲ್ಲಿ ಇಬ್ರಾಹಿಂ ಎಂಬ ಹಣ್ಣಿನ ವ್ಯಾಪಾರಿ ರಣಬಿಸಿಲಿನಿಂದ ಸಾವನ್ನಪ್ಪಿದ್ದಾರೆ. ಜನರು ಈಗ ತುಂಬಾ ಭಯಭೀತರಾಗಿದ್ದಾರೆ.
ಬಿಸಿ ವಾತಾವರಣದಲ್ಲಿ ಮನೆಯಿಂದ ಹೊರಗೆ ಬರುವ ಜನರು ಬೇಗನೆ ಸುಸ್ತಾಗುತ್ತಿದ್ದಾರೆ. ಶಾಖದ ಋಣಾತ್ಮಕ ಪರಿಣಾಮವನ್ನು ತಪ್ಪಿಸಲು, ವಿಶೇಷವಾಗಿ ದಿನದಲ್ಲಿ ಸಾಧ್ಯವಾದಷ್ಟು ನೀರನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಬಹುತೇಕ ನೀರಿನ ಮೂಲಗಳು ಬತ್ತಿ ಹೋಗಿರುವುದರಿಂದ ಹಸು, ಎತ್ತುಗಳಿಗೆ ಕುಡಿಯಲು ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.
ತೆಲಂಗಾಣದಲ್ಲಿ ಬಿಸಿಗಾಳಿ ಬೀಸುತ್ತಿರುವ ಕಾರಣದಿಂದ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಜನರು ಹೊರಗೆ ಹೋಗದಂತೆ ತೆಲಂಗಾಣ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಎಚ್ಚರಿಕೆ ಕೊಟ್ಟಿದ್ದಾರೆ. ಕೂಲಿ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸಂಚಾರ ಸಿಬ್ಬಂದಿ, ಕ್ಷೇತ್ರ ಪತ್ರಕರ್ತರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು ಸೇರಿದಂತೆ ಸಾಕಷ್ಟು ಮುನ್ನೆಚ್ಚರಿಕೆ ಯನ್ನು ವಹಿಸಲು ಸೂಚಿಸಿದ್ದಾರೆ .
ಭಾರತೀಯ ಹವಾಮಾನ ಇಲಾಖೆಯು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಹೈದ್ರಾಬಾದ್ ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಏಪ್ರಿಲ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ ಎಂದಿದ್ದಾರೆ.
ಬಿಸಿಗಾಳಿ ಹೆಚ್ಚಾಗಿ ಇರುವುದರಿಂದ ಸಾವಿಗೆ ಕಾರಣವಾಗುತ್ತದೆ. ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಸಹಕಾರದೊಂದಿಗೆ ದುರ್ಬಲ ವರ್ಗಗಳ ಕೊಳೆಗೇರಿ ಮತ್ತು ಕಾಲೋನಿಗಳಲ್ಲಿ ಓಆರ್‌ಟಿ (ಓರಲ್ ರೀಹೈಡ್ರೇಶನ್ ಥೆರಪಿ) ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತೆಲಂಗಾಣ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಅವರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


