ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ರಾಜಸ್ಥಾನದ ಕಿಶನ್ಘರ್ ನ ನಿವಾಸಿಯಾಗಿರುವ ಅನುರಾಗ್ ಮಲು (34) ಎಂಬುವವರು ಸೋಮವಾರದಂದು ಮೌಂಟ್ ಅನ್ನಪೂರ್ಣ ವ ನ್ನು ಇಳಿಯುತ್ತಿದ್ದಾಗ ಅವರು 6000 ಮೀಟರ್ ಎತ್ತರದಿಂದ ಕೆಳಗೆ ಉರುಳಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಗುರುವಾರದಂದು ಪತ್ತೆಯಾಗಿದ್ದಾರೆ ಮಲು ಅವರ ಸಹೋದರ ಅವರ ಹತ್ತಿರ ಮಾತನಾಡಿದ್ದು, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಅವರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಮೌಂಟ್ ಅನ್ನಪೂರ್ಣ ಜಗತ್ತಿನಲ್ಲಿ 10 ನೇ ಅತಿ ಎತ್ತರದ ಪರ್ವತವಾಗಿದೆ. “ಪರ್ವತಾರೋಹಿ ಅನುರಾಗ್ ಮಲು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅವರು ಜೀವಂತವಾಗಿದ್ದಾರೆ” ಎಂದು ಅನುರಾಗ್ ಅವರ ಸಹೋದರ ಸುಧೀರ್ ಅವರು ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


