ಬೆಳಗಾವಿ: ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕುಮಾರಸ್ವಾಮಿ ಲೇಔಟ್, ಪೋಲಿಸ್ ಕಾಲೋನಿ, ಆಶ್ರಯ ಕಾಲೋನಿ ಹಾಗೂ ವಿವಿಧೆಡೆ ಪ್ರಚಾರ ಕೈಗೊಂಡು, ಜನರ ಬೆಂಬಲಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಳೆದ 5 ವರ್ಷಗಳ ಕಾಲ ಕ್ಷೇತ್ರಾದ್ಯಂತ ನೀವೆಲ್ಲರೂ ನನ್ನನ್ನು ಮನೆಯ ಮಗಳಂತೆ ಕಂಡಿದ್ದೀರಿ, ಪ್ರೀತಿ, ವಾತ್ಸಲ್ಯಗಳಿಂದ ಬರಮಾಡಿಕೊಂಡು, ಪ್ರತಿಯೊಂದು ಅಭಿವೃದ್ಧಿ ಕೆಲಸಗಳಲ್ಲಿ ಭಾಗಿಯಾಗಿ ನನ್ನನ್ನು ಹರಸಿ, ಆಶೀರ್ವದಿಸಿದ್ದೀರಿ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಬೆಲೆ ಕಟ್ಟಲಾಗದು” ಎಂದರು.
ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು, ನಿಮ್ಮ ಆಶೀರ್ವಾದ ಅತ್ಯಗತ್ಯವಾಗಿದೆ. ಇನ್ನೆನು ಚುನಾವಣೆ ಹತ್ತಿರದಲ್ಲಿದೆ. ನಿಮ್ಮ ಬೆಂಬಲ ಯಾವತ್ತಿಗೂ ಕಾಂಗ್ರೆಸ್ ಪಕ್ಷದ ಮೇಲಿರಲಿ” ಎಂದು ವಿನಂತಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


