ಲೋಕಸಭಾ ಸದಸ್ಯತ್ವ ರದ್ದಾದ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸ 12 ತುಘಲಕ್ ಲೈನ್ ಅನ್ನು ಖಾಲಿ ಮಾಡಲಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ಮನೆಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ನಿವಾಸದ ಕೀಯನ್ನು ಶನಿವಾರ ಲೋಕಸಭೆ ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಎರಡು ದಶಕಗಳಿಂದ ಈ ಮನೆಯಲ್ಲಿ ರಾಹುಲ್ ಗಾಂಧಿ ವಾಸವಿದ್ದರು. 2004ರಲ್ಲಿ ಅವರು ಉತ್ತರ ಪ್ರದೇಶದ ಅಮೇಥಿಯಿಂದ ಸಂಸತ್ತಿಗೆ ಬಂದಾಗ ತುಘಲಕ್ ಲೈನ್ 12 ಅನ್ನು ಅವರ ಅಧಿಕೃತ ನಿವಾಸವಾಗಿ ನೀಡಲಾಯಿತು. ಏಪ್ರಿಲ್ 14ರಂದು ರಾಹುಲ್ ಅವರು ತಮ್ಮ ಕಚೇರಿ ಮತ್ತು ಕೆಲವು ವೈಯಕ್ತಿಕ ವಸ್ತುಗಳನ್ನು ಬಂಗಲೆಯಿಂದ ತೆಗೆದುಹಾಕಿದ್ದರು.
ಶುಕ್ರವಾರ ಸಂಜೆಯ ವೇಳೆಗೆ ಉಳಿದ ವಸ್ತುಗಳನ್ನು ಮನೆಯಿಂದ ತೆಗೆಯಲಾಗಿದೆ. ಇನ್ನು ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸವಾದ 10 ಜನಪಥ್ ನಲ್ಲಿ ವಾಸಿಸಲಿದ್ದಾರೆ. ರಾಹುಲ್ ಗಾಂಧಿ ತಮ್ಮ ಕಚೇರಿಗಾಗಿ ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 23 ರಂದು ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾನನಷ್ಟ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ, ಲೋಕಸಭೆಯ ಸಚಿವಾಲಯವು ಒಂದು ತಿಂಗಳೊಳಗೆ ನಿವಾಸವನ್ನು ಖಾಲಿ ಮಾಡುವಂತೆ ಸೂಚಿಸಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


