ಶಿವಮೊಗ್ಗದ ವಿಕಾಸ ಪಿಯುಸಿ ಕಾಂಪೊಸಿಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಅನ್ವಿತಾ.ಡಿ.ಎನ್ ಅವರು 600ಕ್ಕೆ 596 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ರಾಜ್ಯದಲ್ಲಿ ಒಂಭತ್ತು ವಿದ್ಯಾರ್ಥಿಗಳು 596 ಅಂಕಗಳನ್ನು ಗಳಿಸಿದ್ದಾರೆ.
ಅನ್ವಿತಾ.ಡಿ.ಎನ್ ಅವರು ತೀರ್ಥಹಳ್ಳಿ ತಾಲೂಕು ಮಲ್ಲೇಸರ ಗ್ರಾಮದವರು. ತಂದೆ ನಾಗರಾಜ ಅವರು ಕೃಷಿಕರು. ತಾಯಿ ಅನುಸೂಯ. ಮಗಳು ರ‍್ಯಾಂಕ್ ಪಡೆದ ವಿಚಾರ ತಿಳಿದು ತುಂಬಾ ಖುಷಿಯಾಗಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ದ ಜೊತೆಗೆ ಮಾತನಾಡಿದ ಅನ್ವಿತಾ.ಡಿ.ಎನ್ ಅವರು, ʼಕಾಲೇಜಿನ ಉಪನ್ಯಾಸಕರು ತುಂಬ ಸಪೋರ್ಟಿವ್ ಆಗಿದ್ದರು. ಯಾವುದೇ ಸಂದೇಹಗಳಿದ್ದರು ಕೇಳಿದಾಗಲೆ ಅದನ್ನು ಬಗೆಹರಿಸುತ್ತಿದ್ದರು. ಇನ್ನು, ಆಯಾ ದಿನದ ಪಾಠಗಳನ್ನು ಅಂದೇ ವರ್ಕ್ ಮಾಡುತ್ತಿದ್ದೆ. ಊರಿನಿಂದ ಓಡಾಡುವುದು ತುಂಬಾ ಕಷ್ಟ ವಾಗಿತ್ತು. ಹಾಗಾಗಿ ವಿಕಾಸ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದೆ. ಅದ್ದರಿಂದ ಓದಲು ತುಂಬಾ ಅನುಕೂಲವಾಯಿತು. ಹೆಚ್ಚು ಅಂಕ ಪಡೆದ ವಿಚಾರ ತಿಳಿದು ಅಪ್ಪ, ಅಮ್ಮ ತುಂಬಾ ಖುಷಿಯಾಗಿದ್ದಾರೆ. ಮುಂದೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಇದೆ.ʼ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


