ಬೆಂಗಳೂರು : ಸೀರೆ ಎಂದರೆ ಮಹಿಳೆಯರಿಗೆ ಬಹಳ ಅಚ್ಚುಮೆಚ್ಚು , ರೇಟು ಎಷ್ಟಾದರೂ ತೊಂದರೆ ಇಲ್ಲ ಸೀರೆ ಬೇಕೇ ಬೇಕು ಎಂದು ಹಠ ಹಿಡಿಯುವ ಮಹಿಳೆಯರನ್ನು ನೋಡುತ್ತೆವೆ. ಆದರೆ ಇನ್ನೂ, ಡಿಸ್ಕೌಂಟ್ ಸೇಲ್ ನಲ್ಲಿ ಸೀರೆ ಕೊಡ್ತೀವಿ ಅಂದರೆ ಈ ಮಹಿಳೆಯರು ಬಿಡ್ತಾರಾ..?
ಹೌದು, ಬೆಂಗಳೂರಿನಲ್ಲಿ ಡಿಸ್ಕೌಂಟ್ ಸೇಲ್ ಗೆ ಹಾಕಿರುವ ಸಿಲ್ಕ್ ಸೀರೆಯನ್ನು ತೆಗೆದುಕೊಳ್ಳಲು ಮಹಿಳೆಯರು ಮುಗಿಬಿದ್ದು ಮಹಿಳೆಯರು ಸೀರೆಗಾಗಿ ತುಂಬಾ ಜಗಳ ಕೂಡ ಆಡಿದ್ದಾರೆ ಎಂದು ವರದಿಯಾಗಿದೆ.
ಮಲ್ಲೇಶ್ವರಂ ನ 8 ನೇ ಕ್ರಾಸ್ ನಲ್ಲಿರುವ ಕೆನರಾ ಯೂನಿಯನ್ ಹಾಲ್ ನಲ್ಲಿ ಕರ್ನಾಟಕ ಸಿಲ್ಕ್ ಎಂಪೋರಿಯಮ್ ಡಿಸ್ಕೌಂಟ್ ಸೇಲ್ ಹಾಕಿದ್ದು, ಸಿಲ್ಕ್ ಸೀರೆ ಮೇಲೆ ಶೇ 35 ರಷ್ಟು ಡಿಸ್ಕೌಂಟ್ ಘೋಷಿಸಿದ ಹಿನ್ನೆಲೆ ಮಹಿಳೆಯರು ಮುಗಿಬಿದ್ದಿದ್ದಾರೆ. ಸೀರೆ ಕೊಂಡುಕೊಳ್ಳುವ ವೇಳೆ ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆದು ಜಡೆ ಹಿಡಿದು ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


