ಬೆಳಗಾವಿ: ಇವನಾರವ ಇವನಾರವ ಎನ್ನದೆ ಇವ ನಮ್ಮ ಮನೆಯ ಮಗನೆಂದು ಜಾತಿ ಮತ ಪಂಥಗಳನ್ನ ಹೋಗಲಾಡಿಸಿ ಸಮಾನತೆಯ ಜಾತಿ ವರ್ಣರಹಿತ ಸಮಾಜ ನಿರ್ಮಾಣ ಮಾಡಿದ ಜಗಜ್ಯೋತಿ ಬಸವಣ್ಣ ಜಗಕ್ಕೆ ಬೆಳಕುತೊರಿದ 12 ಶತಮಾನದ ಅವರ ವಚನ ಸಾಹಿತ್ಯ ಎಂದೆಂದಿಗೂ ಅಜರಾಮರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ನಗರದ ಆರ್.ಪಿ.ಡಿ ವೃತ್ತದಲ್ಲಿರುವ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಬಸವ ಜಯಂತಿ ನಿಮಿತ್ಯ ಹಮ್ಮಿಕೊಂಡ ಸಭೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ,ಸಮಾಜದಲ್ಲಿದ್ದ ಅಮಾನವೀಯ ವ್ಯವಸ್ಥೆಯ ವಿರುದ್ಧ ಹೋರಾಡಿ ಮಾನವೀಯತೆಯ ಜೀವನ ಮಾರ್ಗಗಳನ್ನೇ ರೂಪಿಸಿದರು. ಸಮಾಜ ಸುಧಾರಕರ ಸಾಲಿನಲ್ಲಿ ಬಸವಣ್ಣನವರು ಅನನ್ಯತೆಯ ವ್ಯಕ್ತಿತ್ವ ಸಂಪನ್ನರಾಗಿ ಕರ್ನಾಟಕದ ನೆಲದಲ್ಲಿ ಲಿಂಗಾಯತ ಧರ್ಮಸ್ಥಾಪಿಸಿ ಹೋರಾಟ ಮಾಡಿರುವುದು ಚಾರಿತ್ರಿಕ ಸತ್ಯ ಎಂದರು.
ವಿಭಾಗ ಪ್ರಭಾರಿ ಚಂದ್ರಶೇಖರ ಕವಾಟಗಿ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ಮಾತನಾಡಿ, ಬಸವಣ್ಣನವರು ಕಟ್ಟಿ ಬೆಳೆಸಿದ ಸಂಘಟನೆಯೇ ಶರಣ ಚಳವಳಿ. ಬಸವಣ್ಣನವರು ಈ ದೇಶದ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ಚರಿತ್ರೆಯನ್ನು ಬಲ್ಲವರು. ಮಾನವೀಯ ವಿವೇಕದ ಅರಿವಿನಲ್ಲಿ ತಮ್ಮ ಹುಟ್ಟಿನ ಮೂಲವನ್ನು ತ್ಯಜಿಸಿ ಕಾಯಕತತ್ವದ ಹೊಸ ಮನುಷ್ಯರಾದರು. ಚೆನ್ನಯ್ಯನ ಮನೆಯ ದಾಸನ ಮಗ ಕಕ್ಕಯ್ಯನ ಮನೆಯ ದಾಸಿಯ ಮಗಳು ಬೆರಣಿಯ ನಾಯುವ ಕಾಯಕಕ್ಕೆ ಹೊಲಕ್ಕೆ ಹೋಗಿದ್ದಾಗ ಪ್ರೀತಿಸಿ ಸಂಗವ ಮಾಡಿದರು. ಅವರ ಸಂಗಕ್ಕೆ ಹುಟ್ಟಿದ ಶಿಶು ನಾನು ಎಂದು ಹೊಸ ಹುಟ್ಟಿನಲ್ಲಿ ಪವಿತ್ರೀಕರಿಸಿಕೊಂಡ ಮನುಷ್ಯರಾದರು.
ಹೀಗೆ ಸರ್ವ ಶರಣರನ್ನು ಒಳಗೊಳ್ಳುವ ಮಹಾಮನೆಯಾಗಿಸಿದರು. ಎಲ್ಲರನ್ನೂ ಅನುಭವ ಮಂಟಪವೆನ್ನುವ ವೇದಿಕೆಗೆ ತಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚಾವೇದಿಕೆಯಾಗಿ ಅದನ್ನು ಬೆಳೆಸಿದರು. ಈ ನಡೆಯೇ ಅವರನ್ನು ಇಡೀ ಶರಣ ಚಳವಳಿಯ ಮಹಾ ನೇತಾರನನ್ನಾಗಿ ಒಪ್ಪಿಕೊಳ್ಳಲು ಕಾರಣವಾಯಿತು.
ಬಸವಣ್ಣನವರ ವಚನರಾಶಿಯನ್ನು ಓದಿದಾಗ ಅವರೊಬ್ಬ ಮಹಾಮಾನವತಾವಾದಿ ಮನುಷ್ಯನೆಂಬುದು ಅರಿವಿಗೆ ಬರುತ್ತದೆ. ಅವರ ವಚನಗಳ ಮೂಲದ್ರವ್ಯವೆಂದರೆ ಅದು ಆತ್ಮನಿರೀಕ್ಷೆ ಆತ್ಮವಿಮರ್ಶೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ ಪ್ರಾಸ್ತಾವಿಕವಾಗಿ ಮಾತಮಾಡಿದರು. ಸಂದೀಪ್ ದೇಶಪಾಂಡೆ ಸ್ವಾಗತಿಸಿದರು. ನೀತಿನ ಚೌಗಲೆ ವಂದಿಸಿದರು. ವೀರಭದ್ರ ಪೂಜಾರಿ, ಸಂತೋಷ ದೇಶನೂರ ನಿರೂಪಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


