ಹುಬ್ಬಳ್ಳಿ: ಶೆಟ್ಟರ್ ನಮ್ಮ ತಂಡದಿಂದ ಹೊರಗೆ ಹೋಗಿದ್ದರಿಂದ ನಮಗೆ ಯಾವುದೇ ನಷ್ಟವಿಲ್ಲ. ನಾವು ಅವರಿಗೆ ನಿವೃತ್ತಿ ಹೊಂದಲು ಹೇಳಿದ್ದೆವು. ಆದರೆ ಈ ಸಲ ಕಪ್ ನಮ್ದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್‌ಗೆ ಟಾಂಗ್ ನೀಡಿದ್ದಾರೆ.
ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ವಿಚಾರದ ಕುರಿತು ಹುಬ್ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಮುಂಬೈ ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಜಾಸ್ತಿಯಿದೆ. ಅದು ಮತ್ತೆ ಮುಂದುವರೆಯಲಿದೆ. ತಂಡದ ಹಳೇ ಕ್ರೀಡಾಪಟುಗಳು ನಿವೃತ್ತಿ ಹೊಂದುತ್ತಾರೆ. ಹೊಸ ಕ್ರೀಡಾಪಟುಗಳು ಉತ್ಸಾಹದಿಂದ ಆಡಿ ನಮ್ಮನ್ನು ಗೆಲ್ಲಿಸುತ್ತಾರೆ. ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರುವುದರಿಂದ ನಮಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಲ್ಪನೆ ಮತ್ತು ಸ್ವಪ್ನ ಕಾಣಲು ಎಲ್ಲರಿಗೂ ಹಕ್ಕಿದೆ. ಅವರೂ ಕಾಣಲಿ ಬಿಡಿ. ಆದರೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್‌ನಿಂದ ನಾವು ಗೆಲ್ಲುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಸೆಂಟ್ರಲ್ ಟಿಕೆಟ್ ನಿರ್ಣಯ ಅಮಿತ್ ಶಾ ಮತ್ತು ಮೋದಿಯವರದ್ದು. ರಾಜ್ಯಸಭಾ ಮತ್ತು ಅದಕ್ಕಿಂತ ಹೆಚ್ಚಿನ ಸ್ಥಾನವನ್ನು ನೀಡುತ್ತೇವೆ. ನಿಮಗೆ ಯಾವ ಸ್ಥಾನ ಬೇಕು ಹೇಳಿ ಎಂದು ಅಮಿತ್ ಶಾ ಮತ್ತು ಮೋದಿಯವರೇ ಶೆಟ್ಟರ್‌ಗೆ ಆಫರ್ ನೀಡಿದ್ದರು. ಆದರೆ ಶೆಟ್ಟರ್ ಅದನ್ನು ಒಪ್ಪದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


