ತಿರುವನಂತಪುರಂ: ಪ್ರದಾನಿ ನರೇಂದ್ರ ಮೋದಿಯವರು ಬಂದರು ನಗರ ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆಗೆ ಇಂದು (ಮಂಗಳವಾರ) ಚಾಲನೆ ನೀಡಲಿದ್ದಾರೆ.
ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ 1,137 ಕೋಟಿ ರೂಪಾಯಿಯಾಗಿದೆ. ಕೊಚ್ಚಿಯ ಪೋರ್ಟ್ ಸಿಟಿಯ ಸುತ್ತಲಿನ 10 ದ್ವೀಪಗಳನ್ನು ಈ ಮೆಟ್ರೋ ಸಂಚಾರ ಮಾಡಲಿದ್ದು, 8 ಎಲೆಕ್ಟ್ರಿಕ್ ಬೋಟ್‌ಗಳು, 38 ಟರ್ಮಿನಲ್‌ಗಳ ಮೂಲಕ ಪ್ರಯಾಣಿಕರಿಗೆ ಸೇವೆಗೆ ಸಿದ್ಧವಾಗಿದೆ.
ಈ ವಾಟರ್ ಮೆಟ್ರೋ ಯೋಜನೆಯು 78 ಕಿಲೋಮೀಟರ್ ವ್ಯಾಪಿಸಿದ್ದು, ಇಲ್ಲಿನ ದ್ವೀಪಗಳಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಈ ವಾಟರ್ ಮೆಟ್ರೋ ರಬ್ಬರ್ ಟೈರ್ಡ್ ಎಲೆಕ್ಟ್ರಿಕ್ ಬೋಗಿಗಳನ್ನು ಹೊಂದಿದ್ದು, ಇದನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿ ತಯಾರು ಮಾಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


