ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿದೆ. 7.3 ತೀವ್ರತೆಯ ಭೂಕಂಪದ ನಂತರ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 4 ರ ತೀವ್ರತೆಯ ನಂತರದ ಕಂಪನಗಳೂ ವರದಿಯಾಗಿವೆ.
ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಸುಮಾತ್ರದ ಪಶ್ಚಿಮ ಕರಾವಳಿಯ ಪ್ರದೇಶವಾಗಿದೆ. ಸುಮಾತ್ರಾ ರಾಜಧಾನಿ ಪಡಂಗ್‌ನಲ್ಲಿ ಪ್ರಬಲ ಕಂಪನದ ಅನುಭವವಾಗಿದೆ. ಜನರು ಈಗಾಗಲೇ ಸೈಬರ್‌ರೂಟ್ ದ್ವೀಪದಿಂದ ಸ್ಥಳಾಂತರಗೊಂಡಿದ್ದಾರೆ.
ಸುಮಾತ್ರಾ ಅತ್ಯಂತ ಭೂಕಂಪನ ಪೀಡಿತ ಪ್ರದೇಶವಾಗಿದೆ. ಸುಮಾತ್ರಾ ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿದೆ, ಇದು ಭೂಮಿಯ ಫಲಕಗಳು ಘರ್ಷಣೆಯಾಗುವ ಪ್ರದೇಶವಾಗಿದೆ. ಇದು ಭೂಕಂಪಗಳ ಅಪಾಯವನ್ನು ಹೆಚ್ಚಿಸುತ್ತದೆ.
ಸುನಾಮಿ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


