ವಾಶಿಂಗ್ಟನ್ : ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಜೋ ಬಿಡೆನ್ ಘೋಷಣೆ ಮಾಡಿದ್ದಾರೆ.
ಇವರ ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಕೂಡ ಪುನರಾಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂದಿನ ವರ್ಷಗಳಲ್ಲಿ ನಮಗೆ ಹೆಚ್ಚಿನ ಹಕ್ಕು ಸಿಗಲಿವೆಯೇ ಅಥವಾ ಹಕ್ಕುಗಳು ಕಡಿಮೆಯಾಗಲಿವೆಯೇ ಎಂಬುದು ಈಗ ನಾವು ಎದುರಿಸುತ್ತಿರುವ ಒಂದು ಪ್ರಶ್ನೆಯಾಗಿದೆ ಎಂದು ಬಿಡೆನ್ ವೀಡಿಯೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏನು ಉತ್ತರ ನೀಡಬೇಕೆಂದು ನನಗೆ ತಿಳಿದಿದೆ. ಅದ್ದರಿಂದ ನಾನು ಮರು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಬಿಡೆನ್ ಹೇಳಿದ್ದಾರೆ.
80 ವರ್ಷದ ಬಿಡೆನ್ ಅವರು ಈಗಾಗಲೇ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ವಯಸ್ಸಾದ ಅಧ್ಯಕ್ಷರಾಗಿದ್ದಾರೆ. ಅಷ್ಟೊಂದು ಹಿರಿಯರಾದ ಅವರು ಮತ್ತೊಮ್ಮೆ ಅಧ್ಯಕ್ಷರಾಗುವುದು ಎಷ್ಟು ಸೂಕ್ತ ಎಂಬುದು ಅವರದೇ ಪಕ್ಷ ಡೆಮಾಕ್ರಟಿಕ್ ಪಕ್ಷದವರೂ ಪ್ರಶ್ನಿಸುತ್ತಿದ್ದಾರೆ. ಆದರೆ ಬಿಡೆನ್ ಎರಡನೇ ಬಾರಿಗೆ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಮತದಾರರು ಅವರ ಪರವಾಗಿ ರಾಲಿ ಮಾಡುತ್ತಿದ್ದಾರೆ.
ಜೋ ಬಿಡೆನ್ ಅವರು ಕಳೆದ ತಿಂಗಳು ಉಕ್ರೇನ್‌ನ ಕೈವ್ ನಗರಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು. ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ಒಂದು ವರ್ಷದ ನಂತರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಕೈವ್‌ಗೆ ಅಚ್ಚರಿಯ ಭೇಟಿ ನೀಡಿದ್ದನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
ಉಕ್ರೇನ್‌ಗೆ 500 ಮಿಲಿಯನ್ ಡಾಲರ್ ಸಹಾಯವನ್ನು ಮಾಡುವುದಾಗಿ ಇದೇ ಸಂದರ್ಭದಲ್ಲಿ ಬಿಡೆನ್ ಘೋಷಿಸಿದರು. ಜಾವೆಲಿನ್‌ಗಳು, ಹೊವಿಟ್ಜರ್‌ಗಳು ಮತ್ತು ಫಿರಂಗಿ ಮದ್ದುಗುಂಡುಗಳನ್ನು ಕೂಡ ಉಕ್ರೇನ್‌ಗೆ ಅಮೆರಿಕ ಪೂರೈಸಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


