ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಇಂದು ಭಾರತಕ್ಕೆ ಆಗಮಿಸಲಿದ್ದಾರೆ. ಚೀನಾದ ರಕ್ಷಣಾ ಸಚಿವರ ಭಾರತ ಭೇಟಿಯು ಶಾಂಘೈ ಕಾರ್ಪೊರೇಷನ್ ಶೃಂಗಸಭೆಯ ಭಾಗವಾಗಿದೆ. ಈ ಭೇಟಿಯ ವೇಳೆ ಗಡಿ ಸಂಘರ್ಷದ ವಿಚಾರವಾಗಿ ಮಾತುಕತೆ ನಡೆಯಲಿದೆ ಎಂದು ವರದಿಯಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ. ಸಭೆಯಲ್ಲಿ ಭಾರತವು ಡೆಪ್ಸಾಂಗ್ ಮತ್ತು ಚಾರ್ಡಿಂಗ್ ನಿಂಗ್ಲುಂಗ್ ಜಂಕ್ಷನ್‌ನಲ್ಲಿ ಪಡೆಗಳನ್ನು ಹಿಂತೆಗೆದುಕೊಳ್ಳುವ ವಿಷಯವನ್ನು ಪ್ರಸ್ತಾಪಿಸುತ್ತದೆ. ಸೇನಾ ಮಟ್ಟದ ಮಾತುಕತೆಯಲ್ಲಿ 2020ರ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳುವ ಭಾರತದ ಪ್ರಸ್ತಾವನೆಯನ್ನು ಚೀನಾ ಒಪ್ಪಲಿಲ್ಲ.
ಗಾಲ್ವಾನ್ ಬಿಕ್ಕಟ್ಟು ಉಭಯ ದೇಶಗಳ ನಡುವಿನ ಸಂಬಂಧವನ್ನು ಹದಗೆಡಿಸಿದ ಏಪ್ರಿಲ್ 2020 ರ ನಂತರ ಚೀನಾದ ರಕ್ಷಣಾ ಸಚಿವರ ಭಾರತಕ್ಕೆ ಇದು ಮೊದಲ ಭೇಟಿಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


