ಕ್ಯಾಲಿಫೋರ್ನಿಯಾ: ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಆದಾಯ ಇಳಿಮುಖ ಕಾಣುತ್ತಾ ನಿರಾಸೆ ಹೊಂದಿದ್ದ ಮೆಟಾ ಪ್ಲಾಟ್ಫಾರ್ಮ್ಸ್ ಸಂಸ್ಥೆಯ ಈ ಕ್ಯಾಲೆಂಡರ್ ವರ್ಷದ ಮೊದಲ ಸ್ಥಾನದಲ್ಲಿ ಅದ್ವಿತೀಯ ಆದಾಯ ಗಳಿಸಿರುವುದು ವರದಿಯಾಗಿದೆ.
ವಾಟ್ಸಾಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಮಾಲೀಕ ಸಂಸ್ಥೆ ಮೆಟಾ ಪ್ಲಾಟ್ಫಾರ್ಮ್ಸ್ನ ಆದಾಯ 2023 ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ 28.6 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಆದಾಯದಲ್ಲಿ ಹೆಚ್ಚಳವಾಗಿರುವುದು ಕೇವಲ ಶೇ. 3 ರಷ್ಟು ಮಾತ್ರ. ಆದರೆ, ಇದು ಷೇರುಪೇಟೆ ನುರಿತರು ಅಂದಾಜು ಮಾಡಿದ್ದಕ್ಕಿಂತ ಉತ್ತಮವಾಗಿದೆ. ಇದರ ಪರಿಣಾಮವಾಗಿ ಮೆಟಾ ಷೇರು ಮೌಲ್ಯ ಶೇ. 15ರಷ್ಟು ಹೆಚ್ಚಳವಾಗಿದೆ.
ಏಪ್ರಿಲ್ 28 ಶುಕ್ರವಾರ ಮೆಟಾ ಷೇರುಬೆಲೆ 239 ಡಾಲರ್ ಎಂದು (ಸುಮಾರು 19,500 ರೂ) ದಾಖಲಾಗಿದೆ. ಅಮೆರಿಕದ ಡೌ ಜೋನ್ಸ್, ಎಸ್ ಅಂಡ್ ಪಿ, ನಾಸ್ಡಾಕ್ ಷೇರುಪೇಟೆಗಳಲ್ಲಿ ಲಿಸ್ಟ್ ಆಗಿರುವ ಮೆಟಾ ಪ್ಲಾಟ್ಫಾರ್ಮ್ ಅಲ್ಲೆಲ್ಲಾ ಕಡೆಯೂ ಅಭಿವೃದ್ಧಿ ಕಂಡಿದೆ. ಇದರ ಪರಿಣಾಮವಾಗಿ ಮೆಟಾದ ಷೇರುಸಂಪತ್ತು ಹೆಚ್ಚಾಗಿದೆ. ಇದರ ಜೊತೆಗೆ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರ ವೈಯಕ್ತಿಕ ಷೇರುಸಂಪತ್ತು 10 ಬಿಲಿಯನ್ ಡಾಲರ್ನಷ್ಟು (ಸುಮಾರು 1.6 ಲಕ್ಷ ಕೋಟಿ ರೂ) ಅಭಿವೃದ್ಧಿ ಕಂಡಿದೆ ಎಂದು ವರದಿಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


