ಕೊರಟಗೆರೆ: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗವು ಚುನಾವಣೆ ತಯಾರಿ ನಡೆಸುತಿದ್ದಾರೆ. ಅಲ್ಲದೆ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆಯಾ ತಾಲೂಕು ಅಧಿಕಾರಿಗಳಿಗೆ ಆದೇಶಿಸಲಾಗಿತ್ತು. ಆದರೆ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ತುಮಕೂರು ಜಿಲ್ಲೆಯ ಚುನಾವಣಾಧಿಕಾರಿಗಳು ನಡೆದುಕೊಳ್ಳುವ ಸನ್ನಿವೇಶ ಬಯಲಾಗಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಕೋಳಾಲ ಹೋಬಳಿಯ ಮಲುಗೋನಹಳ್ಳಿ ಮತಗಟ್ಟೆ ಅವ್ಯವಸ್ಥೆಯ ಗೂಡಾಗಿದೆ. ಈ ಗ್ರಾಮದ ಮತಗಟ್ಟೆ ಕೇಂದ್ರವಾದ ಶಾಲೆಯ ಮೇಲ್ಛಾವಣಿಯ ಮರದ ತೀರುಗಳು ಮುರಿದಿವೆ. ಈಗಲೋ ಆಗಲೋ ಬೀಳುವ ಹಂತದಲ್ಲಿದ್ದು ಅದನ್ನು ಗಮನಿಸಿದರು ಅದನ್ನು ಸರಿ ಮಾಡಿಸುವ ಗೋಜಿಗೆ ಹೋಗಿಲ್ಲ. ಇನ್ನೂ ಮಳೆ ಬಂದರೆ ಮಳೆನೀರು ಒಳಗೆ ತುಂಬಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಷ್ಟು ದಿನ ಗಮನಿಸಿದ ಅಧಿಕಾರಿಗಳು ಈಗ ಪ್ಲಾಸ್ಟಿಕ್ ಟಾರ್ಪಲ್ ತಂದು ಮೇಲೆ ಹೊಂದಿಸಲು ಪ್ರಯತ್ನ ಪಡುತ್ತಿದ್ದಾರೆ. ಆ ಅರ್ಧಂಬರ್ಧ ಮುರಿದಿರುವ ಮೇಲ್ಛಾವಣಿಯ ತೀರು (ಮರದ ಅಡ್ಡೆ) ಮತದಾನ ದೇ ಸಮಯದಲ್ಲಿ ಯಾರ ಮೇಲಾದರೂ ಬಿದ್ದರೆ ಯಾರು ಜವಾಬ್ದಾರರು . ಇದನ್ನು ರಿಪೇರಿ ಮಾಡಿಸುವ ಕೆಲಸದಲ್ಲಿ ಶಿಕ್ಷಣ ಇಲಾಖೆ ಸಹ ಮಲತಾಯಿ ಧೋರಣೆ ಮಾಡಿದೆ.
ಚುನಾವಣೆಗೆ ಅಲ್ಲದಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಲು ಈ ಶಾಲೆಯ ಅಭಿವೃದ್ಧಿ ಮಾಡಬೇಕಿತ್ತು. ಇದರಲ್ಲಿ ಯಾರ ಜಾಣ ಕುರುಡು ಎಂಬುದು ಸಾರ್ವಜನಿಕರ ವಿವೇಚನೆಗೆ ಬಿಟ್ಟಿದ್ದು. ತಿಂಗಳುಗಳಿಂದ ಚುನಾವಣಾ ತಯಾರಿ ಆಗುತ್ತಿದ್ದರೂ ಸಹ ಈ ಮತಗಟ್ಟೆ ಜೀರ್ಣೋದ್ದಾರ ಮಾಡುವಲ್ಲಿ ಚುನಾವಣಾ ಅಧಿಕಾರಿಗಳು ನಿರ್ಲಕ್ಷ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy