ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಶಾಸಕಿ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ರವರು ನೂರಾರು ಕಾರ್ಯಕರ್ತರ ಜೊತೆಗೂಡಿ ರೋಡ್ ಶೋ ಹಾಗೂ ಕಾರ್ನರ್ ಸಭೆ ನಡೆಸಿ ತಮ್ಮ ಸೇವಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆ ಮಾಡಿದ್ದೇನೆ.
ರೈತರಿಗೆ ಅನುಕೂಲವಾಗಲೆಂದು ನೀರಾವರಿ ಇಲಾಖೆಯಿಂದ ಕೆರೆ ತುಂಬುವ ಯೋಜನೆ ಹಾಗೂ ರಸ್ತೆ ಕಾಮಗಾರಿ, ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಹತ್ತು ಹಲವು ಕಾಮಗಾರಿಗಳನ್ನು ಮಾಡಿದ್ದು ನನ್ನ ಅಭಿವೃದ್ಧಿ ಕೆಲಸವನ್ನು ನೋಡಿ ಮತ ನೀಡಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಇಟಗಿ, ಬೇಡರಹಟ್ಟಿ, ಬೋಗುರ್, ಕರವಿನಕೊಪ್ಪ್ ಗ್ರಾಮದ ನೂರಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು,ಬಸವರಾಜ ತುರಮರಿ, ದೇಮಣ್ಣ ಮುತ್ನಾಳ್, ಅಪ್ಪಣ್ಣ ದೊಡಮನಿ, ಬಾಬು ಪಟ್ಟೇದ್, ಗಂಗಪ್ಪ ಬಡಲಿ, ರಮೇಶ ದೇವನವರ್, ಸಂತೋಷ ಗುರನವರ್, ಸುರೇಶ್ ಬಳಗಪ್ಪನವರ್, ರಾಜು ಕುರಬರ, ಬಸವರಾಜ ಅವರಾದಿ, ಮಂಜು ಬಳಗಪ್ಪನವರ್, ಆಕಾಶ ಸತ್ಯಪಗೋಳ, ರಾಜು ಮುದೆಕ್ಕನವರ್, ಗಿರೀಶ್ ಶಿವಪ್ಪನವರ್, ಸಾಗರ್ ಶಿವಪ್ಪನವರ್, ಮಡಿವಲಿ ಬನೋಶಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


