nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ

    November 19, 2025

    ಸಾಲಬಾಧೆ:  ರೈತ ಸಾವಿಗೆ ಶರಣು

    November 19, 2025

    ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ

    November 19, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ
    • ಸಾಲಬಾಧೆ:  ರೈತ ಸಾವಿಗೆ ಶರಣು
    • ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ
    • ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ
    • ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
    • ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
    • ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
    • ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೆನಕನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವಿರಾಟ ಸಭೆ
    ಜಿಲ್ಲಾ ಸುದ್ದಿ May 5, 2023

    ಬೆನಕನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವಿರಾಟ ಸಭೆ

    By adminMay 5, 2023No Comments3 Mins Read
    congress virate sabhe

    ಬೆಳಗಾವಿ: ವಿರೋಧ ಪಕ್ಷದಲ್ಲಿದ್ದರೂ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ಮಂಜೂರು ಮಾಡಿಸಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕಾರ್ಯವೈಖರಿ ಅಭಿನಂದನೀಯವಾಗಿದೆ. ಅವರು ಕ್ಷೇತ್ರದಲ್ಲಿ ಝಾಂಸಿ ರಾಣಿಯಂತೆ ತನ್ನದೇ ಆದ ಸೈನ್ಯವನ್ನು ಕಟ್ಟಿಕೊಂಡಿದ್ದು, ಲಕ್ಷ್ಮೀಯ ಸೈನ್ಯ ಗಮನಿಸಿದರೆ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎನಿಸುತ್ತಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ ಚವಾಣ ಅಭಿಪ್ರಾಯ ಪಟ್ಟರು.

    ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ವಿರಾಟ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಮತದಾರರು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಸುಳ್ಳು ಭರವಸೆ ನೀಡುತ್ತಿದೆ. ಪ್ರಧಾನಿ ಮೋದಿ ಹಿಂದಿನ ಚುನಾವಣೆಯಲ್ಲಿ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದರು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಹಾಕುವುದಾಗಿ ಹೇಳಿದ್ದರು. ಪ್ರತಿ ವರ್ಷ ೨ ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಇವ್ಯಾವುವೂ ಈಡೇರಿಲ್ಲ. ಬಿಜೆಪಿ ಸುಳ್ಳಿನ ಕಂತೆ ಹೇಳಿ ದೇಶದ ವ್ಯವಸ್ಥೆಯನ್ನು ಹದಗೆಡಿಸಿದೆ. ಫುಲಬಾಮಾ ದಾಳಿ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸೈನಿಕರ ರಕ್ಷಣೆಗಾಗಿ ವಿಮಾನ ನೀಡದಿದ್ದರಿಂದ ಅನೇಕ ಯೋಧರು ಹುತಾತ್ಮರಾಗಬೇಕಾಯಿತು. ಮೋದಿ ಸರ್ಕಾರ ಜಾರಿಗೆ ತಂದ ಜಿಎಸ್‌ಟಿಯಂದ ಯಾವುದೇ ಪ್ರಯೋಜನ ಆಗಲಿಲ್ಲ. ಎಲ್‌ಐಸಿ, ಎಸ್‌ಬಿಐ ಹಣವನ್ನು ಅದಾನಿ ಒಡೆತನದ ಕಂಪನಿಗಳಲ್ಲಿ ವಿನಿಯೋಗಿಸಿ ಜನರ ಹಣವನ್ನು ದುರುಪಯೋಗ ಮಾಡಿದೆ. ಮುಸ್ಲಿಮರ ಶೇ.೪ ಮೀಸಲಾತಿಯನ್ನು ಕಡಿಮೆ ಮಾಡಿ ಒಕ್ಕಲಿಗ ಲಿಂಗಾಯತರಿಗೆ ನೀಡಿದೆ. ಮರಾಠರಿಗೆ ಯಾವುದೇ ಮೀಸಲಾತಿ ನೀಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
    ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ವಂಚಿತ ಗ್ರಾಮೀಣ ಕ್ಷೇತ್ರಕ್ಕೆ  ಲಕ್ಷ್ಮೀ ಶಾಸಕಿ ಸಿಕ್ಕಿದ್ದು ಇಲ್ಲಿಯ ಮತದಾರರ ಪುಣ್ಯ. ಕಾಂಗ್ರೆಸ್ ಪಕ್ಷ ರಾಜ್ಯದ ಮತದಾರರಿಗಾಗಿ ಜನಪರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ನೀಡಿದ ಘೋಷಣೆಗಳನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸಲಿದೆ. ಜೊತೆಗೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಹಾಡಲಿದೆ ಎಂದರು.


    Provided by
    Provided by

    ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ತಾವು ೨೦೧೮ರ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರದ ಔದ್ಯೋಗಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಚುನಾವಣಾ ಪ್ರಚಾರಕ್ಕಾಗಿ ಮಹಾರಾಷ್ಟ್ರದಿಂದ ಬಂದಿರುವ ಬಿಜೆಪಿಯ ಚಿತ್ರಾ ವಾಘ ಅವರಿಗೆ ಕ್ಷೇತ್ರದಲ್ಲಿ ಜನರನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ಓರ್ವ ಮಹಿಳೆಯಾಗಿ ತಮ್ಮ ಬಗ್ಗೆ ವಿಚಿತ್ರವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಉದ್ದೇಶವನ್ನು ಕ್ಷೇತ್ರದ ಜನತೆ ಅರಿತಿದ್ದಾರೆ. ಮೇ.೮ರ ಬಳಿಕ ವಿಚಿತ್ರ ಮನೋಭಾವದ ಚಿತ್ರಾ ಅವರ ಮೊಬೈಲ್ ಸ್ವಿಚ್ ಆಫ್ ಆಗಲಿದೆ.  ಕ್ಷೇತ್ರದ ಎಂಇಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಕಳೆದ ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದು, ಪ್ರತಿ ವಿಶೇಷ ಸಂದರ್ಭಗಳಲ್ಲಿ ಬ್ಯಾನರ್ ಅಳವಡಿಸುವ ಕೆಲಸ ಮಾಡಿ ಪೋಸ್ಟರ್ ಬಾಯ್ಸ್ ಎಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಮೇ.೧೦ರ ಬಳಿಕ ಅವರನ್ನು ಮನೆಗೆ ಕಳಿಸುವ ಕೆಲಸ ಕ್ಷೇತ್ರದ ಮತದಾರರಿಂದ ಆಗಬೇಕು ಎಂದರು.

    ಮಹಾರಾಷ್ಟ್ರದ ಶಾಸಕ ಅಮರ ರಾಜೂರಕರ ಮಾತನಾಡಿ, ೨೦೧೮ರಲ್ಲಿ ಲಕ್ಷ್ಮೀ ಕ್ಷೇತ್ರದ ಮತದಾರರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆ. ೧೮೦೦ ಕೋಟಿ ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದ್ದು, ಹೆಬ್ಬಾಳಕರ ಸಚಿವರಾಗಲಿದ್ದಾರೆ. ರಾಜ್ಯದ ಬಸವರಾಜ ಬೊಮ್ಮಾಯಿ ಪೇ ಸಿಎಂ ಆಗಿದ್ದು, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಮತದಾರರು ಪಣ ತೊಡಬೇಕು. ಬಿಜೆಪಿ ಬೆಲೆ ಏರಿಕೆ ಮಾಡಿ ಬಡವರಿಗೆ ತೊಂದರೆ ನೀಡಿದೆ. ಮೋದಿ ಸರ್ಕಾರ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿದೆ. ಸೋನಿಯಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಹಾರ ಸುರಕ್ಷಾ ಕಾಯ್ದೆ ಜಾರಿಗೆ ತಂದಿದ್ದರಿಂದ ಇಂದು ಎಲ್ಲರಿಗೂ ಪಡಿತರ ಸಿಗುತ್ತಿದೆ ಎಂದು ಹೇಳಿದರು.

    ಮಹಾರಾಷ್ಟ್ರದ ಮತ್ತೋರ್ವ ಶಾಸಕ, ಮಾಜಿ ಸಚಿವ ಸತೇಜ್ ಉರ್ಫ್ ಬಂಟಿ ಪಾಟೀಲ ಮತನಾಡಿ, ವಿರಾಟಸಭೆಯಲ್ಲಿ ಭಾಗವಹಿಸಿದ್ದ ಜನರ ಉತ್ಸಾಹ ಗಮನಿಸಿದರೆ ಮೇ.೧೩ರಂದು ವಿಜಯೋತ್ಸವ ನಿಶ್ಚಿತ ಎಂಬುದು ಖಚಿತವೆನಿಸುತ್ತಿದೆ. ಓರ್ವ ಮಹಿಳೆಯಾಗಿ ಎಲ್ಲ ಸಮಾಜದ, ಎಲ್ಲ ಜಾತಿ-ಧರ್ಮ-ಭಾಷೆಯ ಜನರ ಏಳಿಗೆಗಾಗಿ ಲಕ್ಷ್ಮೀ ಹೆಬ್ಬಾಳಕರ ಶ್ರಮಿಸಿದ್ದಾರೆ. ರಾಜಸಂಹಗಡದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಿದ ಲಕ್ಷ್ಮೀ ಪರ ಇಡೀ ಕ್ಷೇತದ ಜನತೆ ಇದ್ದಾರೆ. ಶಿವಾಜಿ ಮಹಾರಾಜರ ವಂಶಜ ಸಂಭಾಜಿ ರಾಜೇ ಈ ಪವಿತ್ರಭೂಮಿಗೆ ಬಂದು ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಿದ್ದಾರೆ. ಬಿಜೆಪಿ ಪುತ್ಥಳಿ ಉದ್ಘಾಟನೆಯ ವಿಷಯದಲ್ಲಿ ರಾಜಕಾರಣ ಮಾಡಿ ಕ್ಷೇತ್ರದ ಜನರ ಮನಸ್ಸಿನಲ್ಲಿ ಕುಗ್ಗಿಹೋಗಿದೆ. ಕೆಲಸ ಮಾಡುವವರಿಗೆ ಗೌರವ ಇದ್ದೇ ಇದೆ ಎಂಬುದನ್ನು ಲಕ್ಷ್ಮೀ ತಮ್ಮ ಬಿಡುವಿಲ್ಲದ ಜನಸೇವೆಯಿಂದ ಸಾಬೀತು ಮಾಡಿದ್ದಾರೆ. ಅವರು ಯಾರನ್ನೂ ಕಡೆಗಣಿಸಿಲ್ಲ. ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ.

    ರಾಜ್ಯದ ಶೇ.೪೦ ಸರ್ಕಾರವನ್ನು ಜನ ಧಿಕ್ಕರಿಸಲಿದ್ದಾರೆ. ಪ್ರಧಾನಿ ಮೋದಿಯವರು ಮೊದಲ ಬಾರಿ ಮನ್ ಕೀ ಬಾತ್ ಪ್ರಾರಂಭಿಸಿದಾಗ ಪೆಟ್ರೋಲ್ ರೂ.೬೦ ಸಿಲೆಂಡರ್ ರೂ.೪೦೦ಕ್ಕೆ ಸಿಗುತ್ತಿತ್ತು. ಅವರ ನೂರನೇ ಮನ್ ಕೀ ಬಾತ್ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ರೂ.೧೦೨ ಮತ್ತು ಸಿಲಿಂಡರ್ ಬೆಲೆ ರೂ.೧೧೦೦-೧೨೦೦ಕ್ಕೆ ಏರಿದೆ. ಇದು ಬಿಜೆಪಿಯ ಸಾಧನೆ. ಬಿಜೆಪಿಯವರು ಮತ ಕೇಳಲು ಬಂದರೆ ಅವರ ಮುಂದೆ ಸಿಲಿಂಡರ್ ತಂದು ಇಡಿ. ಬೆಲೆ ಏರಿಕೆಯ ಬವಣೆಯನ್ನು ಅವರಿಗೆ ತಿಳಿಸಿ ಎಂದು ಕುಟುಕಿದರು.

    ಪಕ್ಷದ ಮುಖಂಡ ಮೃಣಾಲ್ ಹೆಬ್ಬಾಳಕರ ಮಾತನಾಡಿ, ೫ ವರ್ಷಗಳ ಹಿಂದೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅಶೋಕ ಚವಾಣ ಬೆನಕನಹಳ್ಳಿ ಸಭೆಯನ್ನು ಟರ್ನಿಂಗ್ ಸಭೆ, ಇಂದು ವಿನ್ನಿಂಗ್ ಸಭೆ ಎಂದು ಹೇಳಿದರು. ರಾಜಹಂಸಗಡದಲ್ಲಿ ಕೈಗೊಂಡ ಅಭಿವೃದ್ದಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದರು. ಯುವರಾಜ ಕದಮ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರ ಇದುವರೆಗೆ ಜಾತಿ, ಭಾಷೆ ಆಧಾರದ ಮೇಲೆ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಲಕ್ಷ್ಮೀ ಹೆಬ್ಬಾಳಕರ ಯಾವುದೇ ಬೇಧಭಾದ ಮಾಡದೇ ಕ್ಷೇತ್ರದ ಸರ್ವಾಂಗೀಣ ಅಭಿವೃದಿಗೆ ಶ್ರಮಿಸಿದ್ದಾರೆ,  ಕ್ಷೇತ್ರದ ೧೧೦ ದೇವಾಲಯಗಳ ಜೀರ್ಣೋದ್ಧಾರ, ನೂರಾರು ರೋಗಿಗಳಿಗೆ ಸಿಎಂ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯ, ೧೬೦ ಶಾಲಾ ಕೋಣೆಗಳು ಮತ್ತು ಅಂಗನವಾಡಿಗಳನ್ನು ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

    admin
    • Website

    Related Posts

    ಸಾಲಬಾಧೆ:  ರೈತ ಸಾವಿಗೆ ಶರಣು

    November 19, 2025

    ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ

    November 19, 2025

    ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ

    November 18, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ

    November 19, 2025

    ತುಮಕೂರು: ನಗರದ ಸರಸ್ವತಿಪುರಂ ಬಡಾವಣೆಯಲ್ಲಿರುವ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ನ.21ರಂದು ಮತ್ತು 22 ರಂದು ಬೆಳಗ್ಗೆ…

    ಸಾಲಬಾಧೆ:  ರೈತ ಸಾವಿಗೆ ಶರಣು

    November 19, 2025

    ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ

    November 19, 2025

    ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ

    November 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.