ಮೈಸೂರು: ಇಂದು ಕೂಡ ಸ್ವಕ್ಷೇತ್ರ ವರುಣಾದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಮತಯಾಚಿಸಲಿದ್ದಾರೆ. ಸಿದ್ದರಾಮಯ್ಯ ಪರ ಸ್ಟಾರ್ ನಟ, ನಟಿಯರು ರೋಡ್ ಶೋ ನಡೆಸಲಿದ್ದಾರೆ. ವರುಣಾ ಕ್ಷೇತ್ರದ 23 ಗ್ರಾಮಗಳಲ್ಲಿ ನಟರಾದ ಶಿವರಾಜ್ಕುಮಾರ್, ದುನಿಯಾ ವಿಜಯ್, ಮಾಜಿ ಸಂಸದೆ, ನಟಿ ರಮ್ಯಾ ಸೇರಿದಂತೆ ಹಲವರು ಪ್ರಚಾರ ಮಾಡುತ್ತಾರೆ.
ಬರೋಬ್ಬರಿ 23 ಗ್ರಾಮಗಳಲ್ಲಿ ರೋಡ್ ಶೋ ವೇಳಾಪಟ್ಟಿ:
ಬೆಳಿಗ್ಗೆ 9:00ಕ್ಕೆ ಚಿಕ್ಕಳ್ಳಿ , 9:30ಕ್ಕೆ ಭುಗತಗಳ್ಳಿ, 10:00ಕ್ಕೆ ವಾಜಮಂಗಲ, 10:30ಕ್ಕೆ ಮೆಲ್ಲಹಳ್ಳಿ, ಮಧ್ಯಾಹ್ನ 12:00 ಕ್ಕೆ ಹಾರೋಹಳ್ಳಿ, 1:00 ಕ್ಕೆ ಮಾದೇಗೌಡನ ಹುಂಡಿ, 1:30ಕ್ಕೆ ರಂಗನಾಥಪುರ, 2:00 ಕ್ಕೆ ರಂಗಾಚಾರಿ ಹುಂಡಿ, 2:30 ಕ್ಕೆ ರಂಗಸಮುದ್ರ, 3:00 ಕ್ಕೆ ಇಟ್ಟುವಳ್ಳಿ, 3:30 ಕ್ಕೆ ಕುಪ್ಪೆ ಗ್ರಾಮದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಸಂಜೆ 4:00 ಕ್ಕೆ ತುಂಬಲ, 4:30ಕ್ಕೆ ಮುತ್ತತ್ತಿ, 5:00ಕ್ಕೆ RP ಹುಂಡಿ, 5:30 ಕ್ಕೆ ಎಡತೊರೆ, 6:00 ಕ್ಕೆ ಗರ್ಗೇಶ್ವರಿ, 6:30 ಕ್ಕೆ ಹಳೆ ತಿರುಮಕೂಡಲ ಸರ್ಕಲ್, ರಾತ್ರಿ 7:00ಕ್ಕೆ ಹೊಸ ತಿರುಮಕೂಡಲ ಸರ್ಕಲ್, 7:30 ಕ್ಕೆ ಭೈರಾಪುರ ಬಾಬೂ ಜಗಜೀವನ ರಾಮ್ ಪುತ್ಥಳಿ, 8:00 ಕ್ಕೆ ಟಿ. ನರಸೀಪುರ – ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಮೂಲಕ ಬಸ್ ಸ್ಟಾಂಡ್, 8:30 ಕ್ಕೆ ಟಿ ನರಸೀಪುರ ಬೃಂದಾವನ ಹಾಸ್ಪಿಟಲ್ ಎದುರುಗಡೆ ಅಂಬೇಡ್ಕರ್ ಫೋಟೋಗೆ ಪುಷ್ಪಾರ್ಚನೆ, 9:00 ಕ್ಕೆ ವಿವೇಕ ನಗರದ ಮೂಲಕ ಹೆಳವರಹುಂಡಿ ಸರ್ಕಲ್, 9.30 ಕ್ಕೆ ಕೆಎಚ್‌ಬಿ ಸರ್ಕಲ್ ಮೂಲಕ ವಿದ್ಯೋದಯ ಸರ್ಕಲ್ ಆಲುಗೂಡುನಲ್ಲಿ ಮತಯಾಚಿಸಿ ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


