ಹಾಸನ: ಪತಿಯ ಸಾವಿನ ಆಘಾತವನ್ನು ಸಹಿಸಲಾಗದೇ ಪತ್ನಿಯು ತೀವ್ರವಾಗಿ ರೋದಿಸುತ್ತಲೇ ಪತಿಯ ಮೃತದೇಹದ ಮುಂದೆಯೇ ಪ್ರಾಣ ಬಿಟ್ಟ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪಡುವಳಲು ಗ್ರಾಮದಲ್ಲಿ ಇಂದು ನಡೆದಿದೆ.
ನಿನ್ನೆ ರಾತ್ರಿ ಪತಿ ರವೀಶ್(39) ಹೃದಯಾಘಾತದಿಂದ ಮೃತಪಟ್ಟಿದ್ದು, ಇಂದು ಬೆಳಗ್ಗೆ ಪತಿಯ ಮೃತದೇಹದ ಮುಂದೆ ಅಳುತ್ತಿದ್ದ ಪತ್ನಿ ಪ್ರಮೀಳಾ(32) ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆನ್ನಲಾಗಿದೆ.
ಪತಿ ಪತ್ನಿ ಸಾವಿನಲ್ಲೂ ಒಂದಾಗಿದ್ದರೆ, ಇತ್ತ ಇಬ್ಬರು ಗಂಡು ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪಾಲಕರ ಮೃತದೇಹದ ಮುಂದೆ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


