ತುರುವೇಕೆರೆ: ಪಟ್ಟಣದ ಕನ್ನಡ ಭವನದಲ್ಲಿ ಜಾಗೃತಾ ಮತದಾರರ ಬಳಗ ತುಮಕೂರು ಇವರ ವತಿಯಿಂದ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಗಳು, ಜಾಗೃತ ಮತದಾರರ ಬಳಗದ ಸಂಚಾಲಕ ಡಾ.ರಂಗಸ್ವಾಮಿ ಮಾತನಾಡಿ, ನಾವ್ಯಾರೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ಸಮಾಜದಲ್ಲಿ ಒಳ್ಳೆಯ ವಾತಾವರಣವನ್ನು ಸೃಷ್ಟಿಸಬೇಕಾಗಿರುವುದರಿಂದ ಹಲವಾರು ಜನಪರ ಸಂಘಟನೆಗಳು ಸಾಹಿತಿಗಳು ಬುದ್ಧಿಜೀವಿಗಳು ನಾವೆಲ್ಲ ಒಟ್ಟಾರೆಯಾಗಿ ಆಂದೋಲನವನ್ನು ಪ್ರಾರಂಭಿಸುತ್ತಿದ್ದೇವೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಮತಾಂಧ ಪ್ರಕ್ರಿಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಒಳಗೊಂಡಂತೆ ಹೇಳುವುದಾದರೆ ಸಂವಿಧಾನ ಅಡಿಯಲ್ಲಿ ನಡೆಯುತ್ತಿರುವ ಸರ್ಕಾರ ಅದರ ವಿರುದ್ಧವಾಗಿದೆ. ವಾತಾವರಣದ ಮಾದರಿ ಹೇಗಿದೆ ಎಂದರೆ, ಆರ್ ಎಸ್ ಎಸ್ ನಿರ್ದೇಶನದ ಮೂಲಕ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸೂಕ್ತವಾದಂತಹ ವರ್ಣವನ್ನು ಸೃಷ್ಟಿಸಬೇಕಿದೆ .
ಇಂದಿನ ದಶಕಗಳಲ್ಲಿ ನೂರಾರು ಸಾವಿರ ಜನ ಸಾಹಿತಿಗಳು ಎಲ್ಲರೂ ಒಟ್ಟಾಗಿ ಸೇರಿಕೊಂಡು ವಿಶ್ವ ಪಾರ್ಲಿಮೆಂಟ್ ರಚನೆಯಾಗಬೇಕು ಎಂದು ಕೂಗನ್ನು ಎತ್ತಿದರು ನಮಗೆ ನಮ್ಮ ಪರವಾಗಿ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕಿದೆ. ಮಾಧ್ಯಮದ ಮೂಲಕ ಜನರನ್ನು ತಲುಪುವುದೇ ನಮ್ಮ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಬಿಜೆಪಿ ಈ ವಾತಾವರಣವನ್ನು ಹಲವಾರು ಸಮಸ್ಯೆಗಳನ್ನು ಸಮಾಜದಲ್ಲಿ ಹುಟ್ಟು ಹಾಕಿದೆ .
ಈ ಬಾರಿ ಕಾಂಗ್ರೆಸ್ ನ ಅಲೆ ಇರುವುದರಿಂದ ಬೆಂಬಲಿಸುವ ನಿರ್ಧಾರಕ್ಕೆ ನಾವು ಬಂದಿದ್ದೇವೆ ಏಕೆಂದರೆ ಅತಂತ್ರ ಸರ್ಕಾರ ನಿರ್ಮಾಣವಾದರೆ ಬೇರೆ ಬೇರೆ ರೀತಿಯ ಕೆಟ್ಟ ವಾತಾವರಣ ಸೃಷ್ಟಿಯಾಗುವ ಭಯವಿದೆ ಹಾಗೂ ಮನುವಾದಿಗಳು ಸರ್ಕಾರ ರಚನೆಯ ಸಂದರ್ಭದಲ್ಲಿ ಕೈಜೋಡಿಸುವುದರಿಂದ ಸಮಾಜದಲ್ಲಿ ಅಶಾಂತಿ ಮತ್ತು ಹಲವಾರು ತರದ ಸಮಸ್ಯೆಗಳು ಉದ್ಭವವಾಗುತ್ತದೆ ಇದರಿಂದ ಮತದಾರರು ಜಾಗೃತವಾಗಿ ಕಾಂಗ್ರೆಸ್ಸನ್ನು ಬೆಂಬಲಿಸೋಣ ಎಂದು ಕರೆಕೊಟ್ಟರು.
ಲೇಖಕರು ಹಾಗೂ ಕನ್ನಡ ಪ್ರಾಧ್ಯಾಪಕ ಪ್ರೊಫೆಸರ್ ನಟರಾಜ್ ಮಾತನಾಡಿ, ಜನಗಳ ಭೇಟಿ ಮಾಡಲಿಕ್ಕೆ ನಾವು ಬಂದಿದ್ದೇವೆ. ನಾವು ರಾಜಕೀಯ ಪಕ್ಷದ ಸದಸ್ಯರಲ್ಲ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಜಾಗೃತಗೊಳಿಸಿ ಪ್ರಜಾಪ್ರಭುತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಹಣ ಆಮಿಷಗಳಿಗೆ ಬಲಿಯಾಗದಂತೆ ಮತ ನೀಡಲು, ಮುಂದಿನ ಐದು ವರ್ಷಗಳ ಸರ್ಕಾರವನ್ನು ನಾವು ಚುನಾಯಿಸಬೇಕಾಗಿರುವುದರಿಂದ ನಾವು ಜಾಗೃತರಾಗಿ ಮತದಾನ ಮಾಡಬೇಕಾದ ಜವಾಬ್ದಾರಿ ಇದೆ .
ನಾವು ಯಾರನ್ನು ಆಯ್ಕೆ ಮಾಡಬೇಕೆನ್ನುವ ಜಿಜ್ಞಾಸೆಯಲ್ಲಿ ಮತದಾರ ಇದ್ದಾನೆ. ಜಾತಿ ಹಣದ ಆಮಿಷಕ್ಕೆ ಬಲಿಯಾಗಿ ನಿಮ್ಮ ತನವನ್ನು ಕಳೆದುಕೊಳ್ಳಬೇಡಿ. ವರ್ಷಗಳ ಹಿಂದೆ ಒಳ್ಳೆಯ ಸಮಾಜ ನಿರ್ಮಿಸಲು ನಿರ್ಧಾರವನ್ನು ಮಾಡಿ ಆ ಸರ್ಕಾರವನ್ನು ಆಯ್ಕೆ ಮಾಡಿದ್ದು ಆದರೆ ಅವರು ಸಂವಿಧಾನವನ್ನೇ ಬದಲಾಯಿಸುವ ಇರಾದೆ ಇಟ್ಟುಕೊಂಡಿವೆ ಹಾಗೂ ಅತ್ಯಂತ ಭ್ರಷ್ಟತೆಯಿಂದ ಕೇಂದ್ರ ಸರ್ಕಾರ ಕೂಡಿದೆ ಎಂದರು.
ಬಿಜೆಪಿಯವರು ಕಳೆದ ದಶಕದಲ್ಲಿ ಸ್ವಿಸ್ ಬ್ಯಾಂಕಿನಿಂದ ಹಣ ತರುತ್ತೇವೆ, ಎಲ್ಲರ ಅಕೌಂಟಿಂಗು ಹಣವನ್ನು ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದು ಸ್ವಿಸ್ ಬ್ಯಾಂಕಿನ ಹಣವು ಬರಲಿಲ್ಲ ಅಕೌಂಟಿಗೆ ಹಣವನ್ನು ಹಾಕಲಿಲ್ಲ . ಈ ಚರಣದ ಸುಳ್ಳು ಆಶ್ವಾಸನೆಗಳನ್ನು ಕೇಂದ್ರ ಸರ್ಕಾರ ಕೊಟ್ಟು ಜನರನ್ನು ವಂಚಿಸುತ್ತಿದೆ. ಭಾರತದ ರೂಪಾಯಿ ಡಾಲರ್ ಎದುರು ಕುಸಿತ ಕಂಡಿದ್ದು. ಗ್ಯಾಸ್ ಮೇಲೆ ಆಗಿದ್ದು ಅವಶ್ಯಕತೆ ಅರ್ಥ ವ್ಯವಸ್ಥೆ ಕುಸಿತ ಕಂಡಿದೆ ಕೇಂದ್ರ ಸರ್ಕಾರದ ಅಸಮರ್ಥತೆಗೆ ಹಿಡಿದ ಕನ್ನಡಿಯಾಗಿದೆ. ಜಿಎಸ್ ಟಿ ರೂಪದಲ್ಲಿ ನಮಗೆ ರಾಜ್ಯ ಸರ್ಕಾರಕ್ಕೆ ಬರಬೇಕಾದ ಪಾಲು ದೊರೆಯುತ್ತಿಲ್ಲ. ಹಾಗೆ ದೇಶದ ರಕ್ಷಣಾ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ಆರೋಪ ಮಾಡಿದಂತೆ , ಅವರ ಹೇಳಿಕೆಯನ್ನು ಸರ್ಕಾರವು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಅವರು ಹೇಳಿದರು.
ಚೀನಾದವರು ಸುಮಾರು ಒಂದು ಸಾವಿರ ಕಿಲೋಮೀಟರ್ ನಷ್ಟು ಒಳಗೆ, ನುಸುಳಿ ಬಂದಿದ್ದು ಇದರ ಬಗ್ಗೆ ಮೋದಿಯವರಾಗಲಿ ಯಾರೂ ಸಹ ಚಕಾರ ಎತ್ತಿಲ್ಲ ., ಹಾಗೆ ಆತುರಾತುರವಾಗಿ ಎನ್ ಇ ಪಿ ಜಾರಿಗೆ ತರಲಾಯಿತು ಅದರ ಸಾಧಕ ಬಾಧಕಗಳನ್ನು ಚರ್ಚಿಸದೆ ಜಾರಿಗೊಳಿಸಲಾಯಿತು. ಇದು ನಮ್ಮ ಬದುಕಿನ ಭವಿಷ್ಯವನ್ನೇ ಮರೆತಂತಿದೆ ಇನ್ನು ದೇಶದಲ್ಲಿ ಆರ್ ಎಸ್ ಎಸ್ ನಿಂದ ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳು ನಿಯಂತ್ರಣದಲ್ಲಿವೆ ಇದು ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅಮಾನತು ಮಾಡಿರುವುದೇ ಸಾಕ್ಷಿ . ದೇಶದಲ್ಲಿ 10% ನಿಂದ 70% ಗೆ ಸಾಕ್ಷರತೆಯನ್ನು ಹೆಚ್ಚಿಸಿದ್ದು ಕಾಂಗ್ರೆಸ್ ಸರ್ಕಾರ. ಜಿಡಿಪಿಯನ್ನು ಮೇಲಕ್ಕೆ ತರುವಂತ ಕಾರ್ಯಕ್ರಮವನ್ನು ಕಾಂಗ್ರೆಸ್ ಮಾಡಿತ್ತು ಎಂದು ತಿಳಿಸಿದರು.
ಎಂ.ಸಿ.ನರಸಿಂಹಮೂರ್ತಿ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ರವರು ಮಾತನಾಡಿ, ನಮ್ಮ ನಿಮ್ಮೆಲ್ಲರ ಸಂವಿಧಾನ ಅಪಾಯದಲ್ಲಿದೆ. ಆದ್ದರಿಂದ ನಾವುಗಳೆಲ್ಲರೂ ಜಾಗೃತವಾಗಬೇಕಿದೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಿರುವುದರಿಂದ ನಮಗೆ ಅನುಮಾನ ಮೂಡುತ್ತಿದೆ. ಸಂವಿದಾನ ಮನುವಾದಿಗಳ ರಾಜಕೀಯ ಶಕ್ತಿಯನ್ನು ಪಡೆಯಲು ಬಿಟ್ಟರೆ ಮುಂದೆ ದೇಶ ಅಪಾಯದ ಹಂಚಿಗೆ ತಲುಪುತ್ತದೆ. ಭಾರತದ ಸಂವಿಧಾನ ವನ್ನು ಹಿಂದುತ್ವವಾದಿಗಳು ಓದಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಸಿದ್ದಾಂತಗಳು ಹೇಳುವಂತೆ ಇದು ಮತದಾನವೆಲ್ಲ ಮತ ಚಲಾವಣೆ ಇದಕ್ಕೆ ಮೌಢ್ಯವನ್ನು ತುಂಬಿದ್ದಾರೆ. ಮತದಾರರು ಆಸೆ ಆಮಿಷಗಳಿಗೆ ಬಲಿಯಾಗದೆ ಮತವನ್ನುಮಾರಿಕೊಳ್ಳದೆ ಅಭಿವೃದ್ಧಿ ಮಾಡುವವರಿಗೆ ನಿಮ್ಮ ಮತಗಳನ್ನು ನೀಡಿ ಜನಪರವಾಗಿ ಇರುವವರಿಗೆ ಚುನಾವಣೆಯಲ್ಲಿ ಆಯ್ಕೆ ಮಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ನಟರಾಜಪ್ಪ ಎರಗುಂಟೆ , ಪ್ರೊಫೆಸರ್ ಶ್ರೀನಿವಾಸ್ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು ಹಾಗೂ ನಾಗೇಂದ್ರಪ್ಪ ನಿವೃತ್ತ ಇಂಗ್ಲಿಷ್ ಅಧ್ಯಾಪಕರು ಮತ್ತು ದೀಪಕ್ ಕಲ್ಕೆರೆ ಇವರುಗಳು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy