ಮಧುಗಿರಿ ತಾಲೂಕಿನ ಕಮ್ಮನ ಕೋಟೆ ಗ್ರಾಮದಲ್ಲಿ ತುಮಕೂರು ಜಿಲ್ಲಾ ಎಂ.ಎಲ್.ಸಿ. ರಾಜೇಂದ್ರ ರಾಜಣ್ಣ ಅವರು ಕ್ಷೇತ್ರದ ಮಾಜಿ ಶಾಸಕರು ಹಾಗೂ ಪ್ರಸ್ತುತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ತಮ್ಮ ತಂದೆ ಕೆ.ಎನ್.ರಾಜಣ್ಣ ಅವರ ಪರವಾಗಿ ಮತಯಾಚನೆ ಮಾಡಿದರು.
ಕಮ್ಮನ ಕೋಟೆ ಗ್ರಾಮದಲ್ಲಿ ಕೆ.ಎನ್.ರಾಜಣ್ಣರವರ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳು ಆಗಿದ್ದವು. ಆದರೆ ಕಳೆದ ಬಾರಿ ಚುನಾಯಿತರಾದ ಶಾಸಕರು, ಈ ಗ್ರಾಮದ ಕಡೆ ತಿರುಗಿ ಸಹ ನೋಡಿಲ್ಲ. ಇನ್ನೂ ಅಭಿವೃದ್ಧಿ ಎಲ್ಲಿ ಕಂಡೀತು? ಎಂದು ಪ್ರಶ್ನಿಸಿದ ಅವರು, ಈ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪೂಜ್ಯ ತಂದೆಯಾದ ಕೆ.ಎನ್.ರಾಜಣ್ಣರವರಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿ ಅಭಿವೃದ್ಧಿಯತ್ತ ಕಡೆ ಸಾಗಿ ಎಂದು ಗ್ರಾಮದ ಮತದಾರರಿಗೆ ಅವರು ಮನವಿ ಮಾಡಿಕೊಂಡರು.
ಪುರಸಭೆ ಸದಸ್ಯರಾದ ಗಂಗಣ್ಣಿ ಮಾತನಾಡಿ, ರಾಜಣ್ಣರವರ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಒಟ್ಟಾರೆ 16,400 ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈಗಿರುವ ಶಾಸಕರು ಕನಿಷ್ಠ ಪಕ್ಷ 500 ಮನೆಗಳನ್ನೂ ನಿರ್ಮಾಣ ಮಾಡಿಲ್ಲ ಎಂದರಲ್ಲದೇ ಈ ಬಾರಿ 2023ರ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಕೆ.ಎನ್.ರಾಜಣ್ಣ ಅವರಿಗೆ ನೀಡಿ ಜಯಶೀಲರನ್ನಾಗಿ ಮಾಡಿ ಎಂದು ಮನವಿ ಮಾಡಿದರು.
ಗ್ರಾಮದ ಹಿರಿಯರಾದ ಶಿವಣ್ಣರವರು ಮಾತನಾಡಿ, ಈ ಹಿಂದೆ ಕೆ.ಎನ್.ರಾಜಣ್ಣರವರು ಈ ಗ್ರಾಮಕ್ಕೆ ಹತ್ತು ಹಲವು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಇಂತಹ ಜನಪರ ವ್ಯಕ್ತಿಗೆ ಕ್ಷೇತ್ರ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತನೀಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಂತ ಟಾಕೀಸ್ ಮಾಲಿಕರಾದ ನಂಜುಂಡಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಾಂತಣ್ಣ, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


