ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾನುವಾರ ಭೀಕರ ದೋಣಿ ದುರಂತ ಸಂಭವಿಸಿದ್ದು, ನಾಲ್ವರು ಮಕ್ಕಳು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 21 ಸದಸ್ಯರ ತಂಡ ತಾನೂರಿಗೆ ತಲುಪಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇನ್ಸ್ ಪೆಕ್ಟರ್ ಅರ್ಜುನ್ ಪಾಲ್ ರಜಪೂತ್ ನೇತೃತ್ವದಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಇಲ್ಲಿಯವರೆಗೆ 22 ಸಾವುಗಳು ದೃಢಪಟ್ಟಿವೆ. ಹಸ್ನಾ (18), ಸಫ್ನಾ (7), ಫಾತಿಮಾ ಮಿನ್ಹಾ (12), ಸಿದ್ದಿಕ್ (35), ಝಲ್ಸಿಯಾ (40), ಅಫ್ಲಾ (7), ಅನ್ಷಿದ್ (10), ರಜಿನಾ, ಫೈಜಾನ್ (4), ಸಬರುದ್ದೀನ್ (38), ಶಮ್ನಾ ( 17), ಹಾದಿ ಫಾತಿಮಾ (7), ಜಹ್ರಾ, ನೈರಾ, ಸಫ್ಲಾ ಶೆರಿನ್, ರುಶ್ದಾ, ಆದಿಲಾ ಶೆರ್ರಿ, ಐಶಾಬಿ, ಅರ್ಶನ್, ಅದ್ನಾನ್, ಜೀನತ್ (45) ಮತ್ತು ಜೆರಿರ್ (10) ಮೃತರು.
ಮೃತರ ಮರಣೋತ್ತರ ಪರೀಕ್ಷೆ ಶೀಘ್ರದಲ್ಲೇ ಆರಂಭವಾಗಲಿದೆ. ಮೂವರು ಮಕ್ಕಳು ಸೇರಿದಂತೆ 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರು ವೆಂಟಿಲೇಟರ್‌ನಲ್ಲಿದ್ದಾರೆ. ಆಯೇಷಾ (5), ಮುಹಮ್ಮದ್ ಅಫ್ರಾದ್ (5), ಅಫ್ತಾಫ್ (4), ಫಸ್ನಾ (19), ಹಸೀಜಾ (26), ನುಸ್ರತ್ (30) ಮತ್ತು ಜುಬೈದಾ (57) ಚಿತ್ಸಾದಲ್ಲಿದ್ದಾರೆ. ಮೂವರ ವಿವರ ಇನ್ನೂ ಲಭ್ಯವಾಗಿಲ್ಲ.
ತಾನೂರ್ ಒಟ್ಟುಂಪುರದ ತುವಲ್ತಿರಾಮ್ ಬೀಚ್ ನಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿದೆ. ಘಟನೆಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ಸಂಘಟಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಲಪ್ಪುರಂ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಎಲ್ಲಾ ವ್ಯವಸ್ಥೆಗಳನ್ನು ಸಮನ್ವಯಗೊಳಿಸುವ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಗ್ಗೆ ದೋಣಿ ಅಪಘಾತ ಸ್ಥಳಕ್ಕೆ ಆಗಮಿಸಿದ್ದಾರೆ.. ಸಚಿವ ಪಿಎ ಮುಹಮ್ಮದ್ ರಿಯಾಝ್ ಮತ್ತು ಸಚಿವ ಅಬ್ದುರ್ ರೆಹಮಾನ್ ರಕ್ಷಣಾ ಕಾರ್ಯಾಚರಣೆಯ ಸಮನ್ವಯದ ಉಸ್ತುವಾರಿ ವಹಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


