ಖಾನಾಪುರ: ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಬೆಳಗಾವಿ ತಾಲ್ಲೂಕು ಉಚಗಾಂವ ಗ್ರಾಪಂ ಪಿಡಿಒ ವಾಸುದೇವ ರಾಮಚಂದ್ರ ಐಕ್ರುತ (56) ಸೋಮವಾರ ಹೃದಯಾಘಾತದಿಂದ ನಿಧನರಾದರು.
ಸಂಜೆ ಕರ್ತವ್ಯದಿಂದ ಮರಳಿದ ಅವರು ಕೆಲಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿ ಮನೆಗೆ ಮರಳಿದ ಕೂಡಲೇ ಕುಸಿದುಬಿದ್ದರು. ಅವರನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯುಸೇನೆಯ ವಿವಿಧ ಹುದ್ದೆಗಳಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, 2010ರಲ್ಲಿ ಗ್ರಾಮೀಣಾಭಿವೃಧ್ಧಿ ಇಲಾಖೆಯ ಪಿಡಿಒ ಹುದ್ದೆಗೆಆಯ್ಕೆಯಾಗಿದ್ದರು. ಖಾನಾಪುರ ತಾಲೂಕಿನ ಗೋಲ್ಯಾಳಿ, ನೀಲಾವಡೆ, ಕಣಕುಂಬಿ, ಹಲಕರ್ಣಿ, ಬೆಳಗಾವಿ ತಾಲೂಕಿನ ಪೀರನವಾಡಿ, ಕಂಗ್ರಾಳಿ, ಬಾಳೇಕುಂದ್ರಿ ಮತ್ತಿತರ ಗ್ರಾಪಂಗಳಲ್ಲಿಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ಉಚಗಾಂವ ಗ್ರಾಪಂಗೆ ವರ್ಗಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


