ತುರುವೇಕೆರೆ: ರಾಯಸಂದ್ರದಿಂದ ಕೆ.ಕೊಪ್ಪ ಗ್ರಾಮದ ಮತಗಟ್ಟೆಗೆ ಸಂಪರ್ಕಿಸುವ 1/2 ಕಿಲೋಮೀಟರ್ ರಸ್ತೆ, ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಕೆಸರುಮಯವಾಗಿದ್ದು, ಇದರಿಂದಾಗಿ ಇಲ್ಲಿನ ಸಾರ್ವಜನಿಕರು ತೀವ್ರವಾಗಿ ಸಮಸ್ಯೆಗೀಡಾಗಿದ್ದು, ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಹೋರಾಟಗಾರ ರಾಯಸಂದ್ರ ಶಶಿಧರ್, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 56 ರಲ್ಲಿ ಇಲ್ಲಿನ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ವೈಜ್ಞಾನಿಕವಾಗಿ ಮತಗಟ್ಟೆಯನ್ನ ಗುರುತಿಸಿರುವ ಚುನಾವಣಾ ಆಯೋಗ ಮತ್ತು ಚುನಾವಣಾ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ ಚಲಾವಣೆ ಮಾಡಲು ಸುಮಾರು ಏಳು ಕಿಲೋಮೀಟರ್ ಗಳ ಬದಲಿ ರಸ್ತೆಯಾದ ಶ್ರೀ ರಾಮಪುರ ಮಾರ್ಗವಾಗಿ ಕೊಪ್ಪವನ್ನು ತಲುಪಬೇಕಾಗಿದೆ. ವಯಸ್ಸಾದ ನಾಗರಿಕರಿಗೆ ಮತಗಟ್ಟೆ ತಲುಪಲು ಅರಸಹಾಸ ನಡೆಸಿ ಹೆಸರಿನಲ್ಲೇ ನಡೆದುಹೋಗುವ ಪರಿಸ್ಥಿತಿ ಉಂಟಾಗಿದೆ .
ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಬರುವವರೆಗೂ ಯಾವೊಬ್ಬ ಮತದಾರರನ್ನು ಮತ ಚಲಾವಣೆ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy