ತುರುವೇಕೆರೆ: ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೋಳಘಟ್ಟ ಗ್ರಾಮದ ದಲಿತ ಕಾಲೋನಿಯು, 20 ವರ್ಷಕ್ಕೂ ಹೆಚ್ಚು ದಿನದಿಂದ ಮೂಲಸೌಕರ್ಯದಿಂದ ವಂಚಿತವಾಗಿಯೇ ಉಳಿದಿದೆ.
ಈ ದಲಿತ ಕಾಲೋನಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಮನೆಗಳಿದ್ದು, ಈ ಮನೆಗಳಿಗೆ ಅಚ್ಚುಕಟ್ಟಾದ ಚರಂಡಿ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ವ್ಯವಸ್ಥೆಯಿಂದ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಲ್ಲುತ್ತಿದೆ ನಿಂತ ನೀರು, ರೋಗಕಾರಕ ಸೊಳ್ಳೆಗಳ ಆವಾಸಸ್ಥಾನವಾಗಿ ಗ್ರಾಮಸ್ಥರುಗಳು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ,
ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ, ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ದಲಿತರ ಕಾಲೋನಿಗೆ ಭೇಟಿಕೊಟ್ಟು ಕೇವಲ ಆಶ್ವಾಸನೆಯನ್ನು ಕೊಟ್ಟು ಹಿಂದಿರುಗುತ್ತಿದ್ದಾರೆ. ಆದರೆ ಯಾವುದೇ ಅಭಿವೃದ್ಧಿಯನ್ನು ಕೂಡ ಇಲ್ಲಿ ಮಾಡಿಲ್ಲ. ದಲಿತರನ್ನು ಮೂಲ ಸೌಕರ್ಯದಿಂದ ದೂರ ತಳ್ಳುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಇದೀಗ ಕೇಳಿ ಬಂದಿದೆ.
ಇಲ್ಲಿ ಗಮನಿಸಬಹುದಾದ ವಿಷಯ ಏನೆಂದರೆ, ಈ ಜಾಗದಲ್ಲಿ ದಲಿತರು ಬಹಳ ವರ್ಷದಿಂದ ಇಲ್ಲಿಯೇ ವಾಸ ಮಾಡುತ್ತಿದ್ದಾರೆ. ಇದನ್ನ ತಿಳಿದಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಈ ಜಾಗಕ್ಕೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿಯನ್ನು ಕೊಡದೆ, ಸುಮ್ಮನೆ ಅಭಿವೃದ್ಧಿ ಮಾಡುತ್ತೇವೆ ಎಂದು ಕಾಟಾಚಾರದ ಮಾತುಗಳನ್ನ ಆಡಿ ಹಿಂದಿರುಗುತ್ತಿದ್ದಾರೆ.
ದಲಿತ ವಿರೋಧಿ ಅಧಿಕಾರಿಗಳು ಇಲ್ಲಿ ಅಧಿಕಾರದಲ್ಲಿರುವವರೆಗೂ ಗ್ರಾಮದ ಜನರಿಗೆ ನ್ಯಾಯ ಮರೀಚಿಕೆಯಾಗಿದೆ. ತಕ್ಷಣವೇ ಸರ್ಕಾರ, ಇತ್ತ ಗಮನ ಹರಿಸಬೇಕಾಗಿದ್ದು, ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy