ತುರುವೇಕೆರೆ : ಮೊನ್ನೆ ನಡೆದಂತ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದ ಮತದಾರರು ನನ್ನನ್ನು 10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಶೀಲನನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಎಲ್ಲಾ ಮತಬಾಂಧವರಿಗೆ ಹಾಗೂ ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪನವರು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಡನೆ ಮಾತಾಡಿದ ಅವರು, ಒಂದು ಕಡೆ ಹಣಬಲ ಇನ್ನೊಂದು ಕಡೆ ಸ್ವಾಭಿಮಾನ ಹಾಗೂ ಜನಬಲ ನನಗೆ ನನ್ನೊಟ್ಟಿಗೆ ಇದ್ದವರೇ ತೊಂದರೆ ಮಾಡಿ ದ್ರೋಹವೆಸಗಿ ಆರ್ಥಿಕ ಪರಿಸ್ಥಿತಿ ಮಾಡಿ ಅಡ್ಡಿಪಡಿಸಿದಾಗ, ಕಾರ್ಯಕರ್ತರುಗಳು ನನ್ನ ಕೈ ಹಿಡಿದು ಬೂತ್ ಮಟ್ಟದ ಖರ್ಚಿಗೂ ಸಹ ವೆಚ್ಚವನ್ನೇ ಕೇಳದೆ ಅವರೇ ಸ್ವಂತ ಹಣದಿಂದ ಚುನಾವಣೆಯನ್ನು ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಆದ್ದರಿಂದ ಈ ಚುನಾವಣೆಯನ್ನು ನಮ್ಮ ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತಿದ್ದೇನೆ. ಈ ಚುನಾವಣೆ ಕೇವಲ ನನ್ನ ಚುನಾವಣೆ ಅಲ್ಲ ಇದು ಕಾರ್ಯಕರ್ತರ ಚುನಾವಣೆಯಾಗಿದೆ. ಎಲ್ಲಾ ಕಾರ್ಯಕರ್ತರಗಳು ಒಗ್ಗೂಡಿ ನನ್ನನ್ನು ಗೆಲ್ಲಿಸಿದ್ದೀರಾ ಬಿಜೆಪಿಯವರು ಹಣ, ಸೀರೆ, ಮದ್ಯ ಎಲ್ಲವನ್ನು ಹಂಚಿದರೂ ಸಹ ಆಸೆ ಆಮಿಷಗಳಿಗೆ ಬಲಿಯಾಗದೆ, ಮತ ಹಾಕಿರುವುದು ಜನತೆ ಆಸೆ ಆಮಿಷಗಳಿಗೆ ಬಲಿಯಾಗುತ್ತಾರೆ ಎಂಬ ಅವರ ಭ್ರಮೆ ಇಂದು ಹುಸಿಯಾಗಿದೆ. ಆದ್ದರಿಂದ ನನ್ನ ಕ್ಷೇತ್ರವು ವಿವಿಧತೆಗಳಿಂದ ಕೂಡಿದ ಕ್ಷೇತ್ರವಾಗಿದ್ದು ,ಎಲ್ಲಾ ಜಾತಿ ಜನಾಂಗದವರು ನನ್ನನ್ನು ಬೆಂಬಲಿಸಿದ್ದಾರೆ ,ಸಾರ್ವಜನಿಕವಾಗಿ ಭ್ರಷ್ಟಾಚಾರ ಮುಕ್ತವಾಗಿ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಾರೋ ಅವರಿಗೆ ಜನರು ಮುನ್ನಡೆ ನೀಡುತ್ತಾರೆ ಎಂದರು.
ಎಲ್ಲೋ ಹಣ ಸಂಪಾದನೆ ಮಾಡಿ ಇಲ್ಲಿಗೆ ಬಂದು ರಾಜಕಾರಣ ಮಾಡುವವರಿಗೆ ಜನತೆ ತಕ್ಕ ದಾರಿಯನ್ನೇ ತೋರಿಸಿದ್ದಾರೆ. ಮಾನ್ಯ ದೇವೇಗೌಡರು ನಮ್ಮ ಕ್ಷೇತ್ರದ ದಬ್ಬೇಘಟ್ಟ ಹಾಗೂ ಸಿ.ಎಸ್.ಪುರ ಹೋಬಳಿ ಭಾಗಗಳಿಗೆ ಬಂದು ಇಳಿವಯಸ್ಸಿನಲ್ಲೂ ನನ್ನ ಪರವಾಗಿ ಪ್ರಚಾರ ಮಾಡಿದ್ದು , ನನ್ನ ಗೆಲುವಿಗೆ ಕಾರಣವಾಗಿದೆ ಇದಕ್ಕೆ ಅವರಿಗೂ ಸಹ ವಿಶೇಷವಾದ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಟ್ಟಂತ ಪಂಚ ರತ್ನ ಯೋಜನೆಯ ಉದ್ದೇಶಗಳಿಗೆ ಸಂಬಂಧಿಸಿದಂತೆ ಜನತೆ ಯೋಜನೆಗಳ ಪರವಾಗಿ ಸ್ಪಂದಿಸಿಲ್ಲ, ಆದರೂ ಸಹ ಇವು ಜನ ಪರ ಕಾಳಜಿ ಉಳ್ಳ ವಾಗಿದೆ ಯೋಜನೆಗಳಾಗಿವೆ. ಇದನ್ನು ಮತದಾರರು ಅರ್ಥ ಮಾಡಿಕೊಂಡಿಲ್ಲ ಆದರೂ ಸಹ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೋರಾಟ ಮಾಡಿದ್ದಾರೆ ,ಸುಮಾರು 113 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಗಳಿಸಲು ಸಹಾಯಕವಾಗಿದ್ದಾರೆ ಹಾಗೂ ನನ್ನ ಗೆಲುವಿಗೆ ಕಾರಣರಾಗಿದ್ದಾರೆ ವಿಶೇಷವಾಗಿ ನಮ್ಮ ಕ್ಷೇತ್ರದ ಕಾರ್ಯಕರ್ತರುಗಳು ಬೂತ್ ಮಟ್ಟದಲ್ಲಿ ಕಮಿಟಿಗಳನ್ನು ರಚನೆ ಮಾಡಿ . ಹಣವನ್ನು ತಾವೇ ಹೊಂದಿಸಿಕೊಂಡು ಚುನಾವಣೆಯನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ನನ್ನ ಹತ್ತಿರ ಹಣ ಇಲ್ಲದಿದ್ದರೂ ಸಹ ಜನ ಬೆಂಬಲವಿದೆ ಎನ್ನುವುದಕ್ಕೆ ಸಾಕ್ಷಿಯಾಗಿರುವುದು ಈ ಹೆಚ್ಚು ಮತಗಳು ಬಂದಿರುವುದರಿಂದಲೇ, ಆದ್ದರಿಂದ ನಮ್ಮ ಕ್ಷೇತ್ರದ ಜನತೆ ಹಣಕ್ಕೆ ಯಾವುದೇ ಒತ್ತು ನೀಡುವುದಿಲ್ಲ ಎನ್ನುವುದಂತು ಸತ್ಯವಾಗಿದೆ , ರಾಜ್ಯದಲ್ಲಿ ನಮ್ಮ ಜೆಡಿಎಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೂ. ಪ್ರಾಮಾಣಿಕವಾಗಿ ಕೈಲಾದಷ್ಟು ಸರ್ಕಾರದಿಂದ ದೊರಕಬಹುದಾದ ಎಲ್ಲಾ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಂದು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲು ಪಣತೊಡುತ್ತೇನೆ ಎಂದು ಅವರು ಹೇಳಿದರು.
ನೀವುಗಳು ನನ್ನ ಮೇಲೆ ಇಟ್ಟಿರುವಂತ ವಿಶ್ವಾಸಕ್ಕೆ ದಕ್ಕೆ ಬರದಂತೆ ಅಧಿಕಾರ ನಡೆಸುತ್ತೇನೆ. ಮತ್ತೊಮ್ಮೆ ಎಲ್ಲಾ ಮತ ಬಾಂಧವರಿಗೂ ಹಾಗೂ ಕಾರ್ಯಕರ್ತರುಗಳಿಗೂ ಮುಖಂಡರುಗಳಿಗೂ ನನ್ನ ಗೆಲುವಿಗೆ ಪ್ರತ್ಯಕ್ಷವಾಗಿಯು ಹಾಗೂ ಪರೋಕ್ಷವಾಗಿಯು ಶ್ರಮಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಕೃಷ್ಣಪ್ಪ, ಹೆಡಿಗೆಹಳ್ಳಿವಿಶ್ವನಾಥ್, ರಂಗಸ್ವಾಮಿ ಮುನಿಯೂರು, ವಿಜಯೇಂದ್ರ ಮಾವಿನಕೆರೆ, ವೆಂಕಟಾಪುರ ಯೋಗೀಶ್, ಸಂಪತ್ ಕುಮಾರ್ ಗುಳದಹಳ್ಳಿ, ಕೃಷ್ಣಪ್ಪ ಹೊನ್ನೇನಹಳ್ಳಿ, ಮಂಗಿ ಕುಪ್ಪೆಗಂಗಣ್ಣ, ಭುವನಹಳ್ಳಿ ದೇವರಾಜ್, ರಂಗಸ್ವಾಮಿ ದೊಡ್ಡಶೆಟ್ಟಿಕೆರೆ, ಲೋಕೇಶ್ ಮಾಯಸಂದ್ರ, ಚೇತನ್ ಜವರೇಗೌಡ, ರಾಮಕೃಷ್ಣ ತೊರೆ ಮಾವಿನಹಳ್ಳಿ, ಜುಂಜಪ್ಪ ಸ್ವಾಮಿ ದಂಡಿನ ಶಿವರ ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy