ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಲಾಗುವುದು ಎಂದು ಮಂಗಳವಾರ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಪರಮೇಶ್ವರ್ ಇಂದು ಉಲ್ಟಾ ಹೊಡೆದಿದ್ದಾರೆ. ಷರತ್ತು ವಿಧಿಸುವುದಿಲ್ಲ ಕೆಲ ಮಾನದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಘೋಷಣೆ ಮಾಡುವ ಮುನ್ನ ಹಣಕಾಸಿನ ಸ್ಥಿತಿಯನ್ನು ವರ್ಕೌಟ್ ಮಾಡಿದ್ದೇವೆ. ಅದಕ್ಕೆ ಬೇಕಾದ ಮಾನದಂಡ ರೂಪಿಸಬೇಕು. ಅ ಮಾನದಂಡ ರೂಪಿಸಿ ಜಾರಿ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಈಗಾಗಲೇ ವಿಧವಾ ವೇತನ ಪಡೆಯುತ್ತಿರುವವರಿಗೆ 2 ಸಾವಿರ ಕೊಟ್ಟರೆ ಡಬಲ್ ಆಗುತ್ತದೆ. ಹೀಗೆ ಕೆಲವೊಂದು ವಿಚಾರಗಳಿವೆ. ಇವೆಲ್ಲವನ್ನು ವರ್ಕೌಟ್ ಮಾಡಿ ಜಾರಿ ಮಾಡಲಾಗುವುದು ಎಂದು ವಿವರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


