ನಾಗ್ಪುರ: ಪೆಟ್ರೋಲ್ ಬಂಕ್ ಮಾಲೀಕನನ್ನು ಚೂರಿ ಇರಿದು ಕೊಂದು ಹಣ ದೋಚಿ ಪರಾರಿಯಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬುಧವಾರ ನಡೆದಿದ್ದು, ಸುಮಾರು ಮೂವರಿದ್ದ ತಂಡ ಈ ದುಷ್ಕೃತ್ಯ ಎಸಗಿದೆ.
ಘಟನೆ ನಡೆದ ಕೇವಲ 30 ನಿಮಿಷಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೆಟ್ರೋಲ್ ಬಂಕ್ ಮಾಲೀಕ ಮತ್ತು ಸಿಬ್ಬಂದಿಯೋರ್ವ ಸಂಗ್ರಹವಾದ ಹಣ ಎಣಿಕೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಮೂವರು ದರೋಡೆಕೋರರು ಚಾಕುವಿನಿಂದ ಪೆಟ್ರೋಲ್ ಬಂಕ್ ಮಾಲೀಕ ಮತ್ತು ಸಿಬ್ಬಂದಿಗೆ ಇರಿದಿದ್ದಾರೆ. ಆರೋಪಿಗಳು ಮಾಲೀಕರಿಗೆ ಸುಮಾರು 15 ಬಾರಿ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಸಿಬ್ಬಂದಿಗೂ ಗಾಯವಾಗಿದೆ.
ಪೆಟ್ರೋಲ್ ಬಂಕ್ ನಲ್ಲಿದ್ದ ಸುಮಾರು 1.34 ಲಕ್ಷ ರೂಪಾಯಿಯೊಂದಿಗೆ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಉಮ್ರೇಡ್ ಎಂಬಲ್ಲಿ ಸೆರೆ ಹಿಡಿದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


