ವಿಶ್ವ ಭಾರತಿ ಖೇಲ ಕ್ರೀಡ ಫೌಂಡೇಶನ್ ಬೆಳಗಾವಿ ವತಿಯಿಂದ ಜೂನ್ 11 ರಿಂದ ಕಾರ್ಗಿಲ್ ಯುದ್ಧದ ಸ್ಮರಣಾರ್ಥ ವಾಗಿ ಮ್ಯರಾಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ಅನಿಲ್ ದೇಸಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕಾರ್ಯಕ್ರಮದ ಉದ್ದೇಶ ನಾನು 2016ರಲ್ಲಿ ಸೈನ್ಯ ದಿಂದ ನಿವೃತ್ತರಾಗಿ ಬಂದಾಗ ದೇಶದ ಗ್ರಾಮೀಣ ಮಟ್ಟದಲ್ಲಿ ಯುವಕರು ಮೊಬೈಲ್ ದಿಂದಾಗಿ ತಮ್ಮ ಸಂಸ್ಕೃತಿ ಹಾಗೂ ಕ್ರೀಡಾ ಮನೋಭಾವವನ್ನು ಮರೆಯುತ್ತಿದ್ದಾರೆ. ಅವರಿಗೋಸ್ಕರ ಕಾರ್ಯಕ್ರಮಗಳನ್ನು ರೂಪಿಸಿ ವಿಶ್ವಭಾರತಿ ಖೇಲ್ ಫೌಂಡೇಶನ್ ಸ್ಥಾಪಿಸಿ ಯುವಕರಗಳಿಗೆ ಕ್ರೀಡೆಗಳ ಹಾಗೂ ಸಂಸ್ಕೃತಿಯ ಜಾಗೃತಿಗಾಗಿ ಮತ್ತು ನಮ್ಮ ಕ್ರೀಡೆಗಳನ್ನು ಯುವಕ ಯುವತಿಯರಿಗೆ ಪ್ರೇರಿಸುವ ಸಲುವಾಗಿ ನಮ್ಮ ಸಂಸ್ಥೆ ಈಗಾಗಲೇ ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇರುವಂತಹ ಶಾಲಾ ಮಕ್ಕಳೊಂದಿಗೆ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗ ನಗರ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ತೆಗೆದುಕೊಂಡು ಹೋಗಲು ನಮ್ಮ ಸಂಸ್ಥೆ ಕಾರ್ಯಪ್ರವೃತವಾಗಿದೆ ಎಂದರು.
ಇದೆ ವೇಳೆ ಎಲ್ ಜಿ ಕೋಳೆಕರ್ ಅವರು ಮಾತನಾಡಿ 38 ವರ್ಷಗಳ ಕಾಲ 6,000 ಯುವಕ ಯುವತಿ ಅವರಿಗೆ ಖೋ ಖೋ, ಕಬಡ್ಡಿ ಅಟ್ಲಾಸ್ಟಿಕ್, ಇಂಥ ಕ್ರೀಡೆಗಳ ತರಬೇತಿ ನೀಡಿದ್ದೇನೆ. ಅದರಲ್ಲಿ 22 ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ ಎಂದರು.
ರಾಮಕ್ಕಾ ನಂದ ಅವರು ಮಾತನಾಡಿ ನಾನು ಅರಣ್ಯ ಪ್ರದೇಶದ ಹಳ್ಳಿಗಳಿಂದ ಬಂದಿರುವ ಒಬ್ಬ ಹೆಣ್ಣುಮಗಳು ವಿಶ್ವ ಭಾರತಿ ಖೇಲ್ ಕ್ರೀಡಾ ಫೌಂಡೇಶನ್ ಸಂಸ್ಥೆ ಅರಣ್ಯ ಪ್ರದೇಶದಲ್ಲಿರುವ ಹಳ್ಳಿಗಳಿಗೆ ಭೇಟಿ ನೀಡಿ ಕ್ರೀಡೆಯ ಕುರಿತು ಯುವಕರಗಳಿಗೆ ಜಾಗೃತಿ ಮೂಡಿಸುತ್ತಾ ಇದೆ. ಇವರ ಕೆಲಸದಿಂದ ನಾನು ಪ್ರೇರೇತರಾಗಿ ಇವರ ಜೊತೆ ಕೆಲಸ ಮಾಡಲು ಕೈಜೋಡಿಸಿದ್ದೇನೆ ಯುವಕರು ಮೊಬೈಲ್ ದಿಂದ ಆಗುವ ದುಷ್ಪರಿಣಾಮಗಳನ್ನು ಅರಿತು ತಮ್ಮ ಪಾರಂಪರಿಕ ಕ್ರೀಡೆಗಳ ಕಡೆ ಗಮನಹರಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಈ ವೇಳೆ ಅನಿಲ್ ದೇಸಾಯಿ, ದಾಮೋದರ್ ಕಣಬರ ಕರ್, ರವೀಂದ್ರ ಬ್ರಿಜಿ, ಮಹಾದೇವ್ ಗುಂಡಪಿ , ರಾಜೇಶ್ವರಿ ತೊಡವೇಕರ್, ವಿನೋದ್ ಗುರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


