ಆರ್ ಬಿಐ 2000 ರೂಪಾಯಿ ನೋಟು ಹಿಂಪಡೆದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದು ಜನರಿಗೆ ತೊಂದರೆ ಕೊಡುವ ಮತ್ತೊಂದು ನೋಟು ಅಮಾನ್ಯೀಕರಣ ಎಂದು ಖರ್ಗೆ ಆರೋಪಿಸಿದರಲ್ಲದೇ, ಕರ್ನಾಟಕದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಪ್ರೀತಿಯ ಸರಕಾರ ಎಂದು ಬಣ್ಣಿಸಿದ ಅವರು, ಚುನಾವಣೆಗೂ ಮುನ್ನ ಜನತೆಗೆ ನೀಡಿದ ಐದು ಭರವಸೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಮೋದಿ ಜಪಾನ್ ಗೆ ಹೋದಾಗಲೆಲ್ಲ ನೋಟು ಅಮಾನ್ಯೀಕರಣವನ್ನು ತರುತ್ತಾರೆ. ಕಳೆದ ಬಾರಿ ಜಪಾನ್ ಗೆ ಹೋದಾಗ 1000 ರೂಪಾಯಿ ನೋಟು ಬ್ಯಾನ್ ಆಗಿದ್ದರೆ, ಈ ಬಾರಿ 2000 ರೂಪಾಯಿ ನೋಟು. ಇದರಿಂದ ದೇಶಕ್ಕೆ ಲಾಭವೋ, ಹಾನಿಯೋ ಗೊತ್ತಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಜನರಿಗೆ ತೊಂದರೆ ಕೊಡುವ ಕ್ರಮವಾಗಿದೆ ಎಂದು ಖರ್ಗೆ ಆರೋಪಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


