ನೂತನ ಸಂಸತ್ ಕಟ್ಟಡವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಿಂದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ತಿನ ಉದ್ಘಾಟನೆ ಮಾಡಲಿದ್ದಾರೆ.
ಹೊಸ ಸಂಸತ್ ಭವನ ಪ್ರಧಾನಿ ಮೋದಿಯವರ ಶೋ-ಆಫ್ ಯೋಜನೆ ಎಂದು ಕಾಂಗ್ರೆಸ್ ಈ ಹಿಂದೆ ಟೀಕಿಸಿತ್ತು. ಉದ್ಘಾಟನಾ ಸಮಾರಂಭಕ್ಕೆ ಕೆಲವೇ ದಿನಗಳಿರುವಾಗ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೂತನ ಸಂಸತ್ ಭವನ ಉದ್ಘಾಟನೆಯನ್ನು ಟೀಕಿಸಲು ಇತರ ವಿರೋಧ ಪಕ್ಷಗಳ ನಾಯಕರು ಈಗಾಗಲೇ ಮುಂದಾಗಿದ್ದರು. ಪ್ರಧಾನಮಂತ್ರಿ ಕೇವಲ ಸರ್ಕಾರದ ಮುಖ್ಯಸ್ಥರೇ ಹೊರತು ಸದನದ ಪ್ರಭು ಅಲ್ಲ ಎಂಬ ಟೀಕೆಯನ್ನು ಪ್ರತಿಪಕ್ಷಗಳು ಮುಖ್ಯವಾಗಿ ಎತ್ತಿದವು. ಲೋಕಸಭೆ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಏಕೆ ಕಟ್ಟಡವನ್ನು ಉದ್ಘಾಟಿಸಲಿಲ್ಲ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕೇಳಿದ್ದರು.
ಸಾವರ್ಕರ್ ಅವರ ಜನ್ಮದಿನವಾದ ಮೇ 28 ರಂದು ಉದ್ಘಾಟನಾ ಸಮಾರಂಭವನ್ನು ತೃಣಮೂಲ ಕಾಂಗ್ರೆಸ್ ಕೂಡ ಟೀಕಿಸಿತ್ತು. ಅದಾದ ಬಳಿಕ ರಾಹುಲ್ ಗಾಂಧಿ ಕೂಡ ಪ್ರಧಾನಿಯವರನ್ನು ಉದ್ಘಾಟನೆ ಮಾಡದಂತೆ ಕೇಳಲು ಮುಂದಾದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


