ಈಗಾಗಲೇ 8+2 – 10 ಜನರಿಗೆ ಮಿನಿಸ್ಟರ್, ಉಪಮುಖ್ಯಮಂತ್ರಿ ಹೀಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇನ್ನುಳಿದವರಿಗೆ ಮೂರು ದಿನ ಆದ ಮೇಲೆ ಸಚಿವ ಸ್ಥಾನ ಕೊಡ್ಬಹುದು ಅಂತ ಅನ್ಕೊಂಡಿದ್ದೇನೆ. ಇನ್ನು 24, 25 ಸಚಿವರನ್ನ ಮಾಡ್ಬೇಕು. ಬಹುಶಃ ಅದೆಲ್ಲಾ ಆದ ಮೇಲೆ ಮಾಡುವ ಚಿಂತನೆ ಇರ್ಬಹುದು ಮುಖ್ಯಮಂತ್ರಿಗಳಿಗೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈಗ ಆಗಿರೋರೆಲ್ಲಾ ಹಿರಿಯ ಸಚಿವರೇ. ಸ್ವಾಭಾವಿಕವಾಗಿ ಎಲ್ಲರಿಗೂ ದೊಡ್ಡ ದೊಡ್ಡ ಖಾತೆಗಳ ಬಗ್ಗೆ ಚಿಂತನೆ ಇರುತ್ತೆ ಎಂದರು.
ಯಾರಿಗೆ ಯಾವ ಖಾತೆ ಕೊಡ್ಬೇಕು ಅನ್ನೋದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ತುಮಕೂರು ಜಿಲ್ಲೆಯಲ್ಲಿ ಇನ್ನು ಮೂರು ಸಚಿವ ಅಕಾಂಕ್ಷಿಗಳ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಮೂರೇ ಯಾಕೆ 7 ಜನರನ್ನು ಸಚಿವರನ್ನಾಗಿ ಮಾಡಬಹುದಲ್ವಾ ಎಂದು ಮರು ಪ್ರಶ್ನೆ ಹಾಕಿದರು.
7 ಜನರನ್ನ ಸಚಿವರನ್ನಾಗಿ ಮಾಡಬಹುದು, ಯಾಕೆ ತುಮಕೂರಿಗೆ ಮೂರು.. ನಮ್ಮ ಹೈಕಮಾಂಡ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದರು. ಅವರಿಬ್ಬರು ಯಾವ ತೀರ್ಮಾನವನ್ನ ತಗೊಳ್ತಾರೆ. ಅದರಂತೆ ನಡೆಯುತ್ತೆ ಎಂದರು.
ದಲಿತ ಸಿಎಂ ಕೂಗು ಕೇಳಿಬಂದ ವಿಚಾರ ಅದೆಲ್ಲಕ್ಕೂ ಈಗ ತೆರೆ ಬಿದ್ದೋಗಿದೆ. ಈಗ ಆ ಕೂಗುಗಳೆಲ್ಲಾ, ಸರ್ಕಾರವನ್ನ ನಡೆಸೋದಿಕ್ಕೆ ಸಹಾಯ ಮಾಡಿದ್ರೆ ಸಾಕು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


