ವೈ.ಎನ್.ಹೊಸಕೋಟೆ: ಗ್ರಾಮದ ಆರ್.ವಿ.ಪಿ ಪ್ರೌಢಶಾಲಾ ಆವರಣದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಜನ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾತನಾಡಿದ ಸಿಪಿಐ ಕಾಂತರೆಡ್ಡಿಯವರು ಈ ಸಭೆಯನ್ನು ಆಯೋಜಿಸುವ ಉದ್ದೇಶ ಜನರು ಪೋಲಿಸರು ಹಾಗೂ ಪೋಲಿಸ್ ಸ್ಟೆಷನ್ ಗಳನ್ನು ನೋಡಿ ಭಯಪಡುವ ಅಗತ್ಯ ಇಲ್ಲ ಯಾವುದೆ ದಲ್ಲಾಳಿಗಳು ಇಲ್ಲದೆ ಜನರು ನಮ್ಮ ಬಳಿ ಬಂದು ನಿಮ್ಮ ಸಮಸ್ಯೆಗಳನ್ನು ಹೇಳಬಹುದು ಎಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಿಟ್ ವ್ಯವಸ್ಥೆ ಇಲ್ಲವಾಗಿದೆ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಐರವರು ಈಗ ಪ್ರತಿ ಐದು ಹಳ್ಳಿಗೆ ಇಬ್ಬರು ಪೋಲಿಸರನ್ನು ಬಿಟ್ ವ್ಯವಸ್ಥೆಗೆ ಆಯೋಜಿಸಲಾಗಿದೆ ಯಾರು ಸಹ ಸುಳ್ಳು ಹೇಳುವುದಕ್ಕೆ ಆಗುವುದಿಲ್ಲ ಎಲ್ಲವು ಸಹ ಕಂಪ್ಯೂಟರ್ ನಲ್ಲಿ ದಾಖಲಾಗುತ್ತದೆ ನಾನು ಸಹ ಪ್ರತಿ ಹದಿನೈದು ದಿನಕ್ಕೊಮ್ಮೆ ಪರಿಶೀಲನೆ ಮಾಡುತ್ತೆನೆ ಎಂದು ಹೇಳಿದರು
ಈ ವೇಳೆ ನೆರೆದಿದ್ದ ಯುವಕರು ಹಾಗು ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ದಿನೆ ದಿನೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಇದನ್ನು ಪರಿಹರಿಸುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅನುಮತಿ ಪಡೆದು ಶೀಘ್ರದಲ್ಲಿ ಈ ಟ್ರಾಫಿಕ್ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಕಾಂತರೆಡ್ಡಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಆರ್ ಅಶ್ವಥ್ ಕುಮಾರ್, ಎನ್.ಎಸ್, ಮಂಜು, ಬಿ.ಹೊಸಹಳ್ಳಿ ನಾಗರಾಜು, ಲಕ್ಷ್ಮಣಮೂರ್ತಿ, ಪ್ರಕಾಶ್, ರಮೇಶ್, ಸಾಯಿ, ಸದಾನಂದ, ಜಾಲೋಡು ತಿಪ್ಪೇಸ್ವಾಮಿ ಮುಂತಾದ ಗ್ರಾಮಸ್ಥರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA