ಶಾಸಕನಾಗಿ ಅಧಿಕಾರ ವಹಿಸಿಕೊಂಡು ಕೇವಲ 16 ದಿನಗಳು ಆಗಿದ್ದು ಮುಂದಿನ ದಿನದಲ್ಲಿ ಸರ್ವ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ ಎಂದು ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ತುರುವೇಕೆರೆ ಕ್ಷೇತ್ರ ವ್ಯಾಪ್ತಿಯ ಕಲ್ಲೂರು ಚಿಕ್ಕ ಕಲ್ಲೂರು ಗ್ರಾಮದ ಶಿಂಷಾ ನದಿಗೆ ಸೇತುವೆ ನಿರ್ಮಣ ಕ್ಕೆ ಚಾಲನೆ ನೀಡಿದ ಮಾತನಾಡಿದರು
ಸಾಕಷ್ಟು ಭಾಗದಲ್ಲಿ ಸಮಸ್ಯೆಗಳು ಇದ್ದು ಅವೆಲ್ಲವನ್ನು ಸರಿಪಡಿಸುತ್ತೇವೆ ಗುಬ್ಬಿ ಹಾಗೂ ತುರುವೇಕೆರೆ ತಾಲೂಕಿಗೆ ಬೃಹತ್ ಕೈಗಾರಿಕೆಗಳ ಅವಶ್ಯಕತೆ ಇಲ್ಲ ಇದರ ಬದಲಿಗೆ ತೆಂಗು ಹಾಗೂ ಅಡಿಕೆಗೆ ಸಂಬಂಧಪಟ್ಟಂತೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ರೈತರಹಿತವನ್ನು ಕಾಯುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರದದಲ್ಲಿರುವ ಮುಖ್ಯಮಂತ್ರಿಗಳು ಸಚಿವರು ನಮ್ಮ ಪಕ್ಷದದಲ್ಲಿ ಇದ್ದವರು ಹಾಗಾಗಿ ತುರುವೇಕೆರೆ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಯಾವುದೆ ತೊಂದರೆ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಪ್ರಣಾಳಿಕೆಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಲಿಲ್ಲವೆಂದರೆ ಹೋರಾಟ ಅನಿವಾರ್ಯವಾಗಿರುತ್ತದೆ ಎಂದು ತಿಳಿಸಿದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


