ಮಹಾರಾಷ್ಟ್ರದ ಅಹ್ಮದ್ ನಗರಕ್ಕೆ ಮರುನಾಮಕರಣ ಮಾಡಲಾಗಿದೆ. ಅಹ್ಮದ್ ನಗರವನ್ನು ಅಹಲ್ಯಾ ನಗರ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದರು. ಬುಧವಾರ ಅಹ್ಮದ್ ನಗರದಲ್ಲಿ ಅವರು ಘೋಷಣೆ ಮಾಡಿದರು. 18ನೇ ಶತಮಾನದಲ್ಲಿ ಮರಾಠಾ ಸಾಮ್ರಾಜ್ಯದ ರಣಜಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್ ಅವರ ಗೌರವಾರ್ಥವಾಗಿ ಈ ಹೆಸರನ್ನು ಇಡಲಾಗಿದೆ. ಅವರು ಅಹ್ಮದ್ ನಗರದ ಚೋಂಡಿ ಗ್ರಾಮದಲ್ಲಿ ಜನಿಸಿದರು.
ಕಳೆದ ಫೆಬ್ರವರಿಯಿಂದ ಅಹಮದ್ ನಗರ ಹೆಸರನ್ನು ಬದಲಾಯಿಸುವಂತೆ ಬಿಜೆಪಿ ಒತ್ತಾಯಿಸುತ್ತಿದೆ. ಮೊದಲು, ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಒಸ್ಮಾನಾಬಾದ್ ಅನ್ನು ಧಾರಶಿವ್ ಎಂದು ಮರುನಾಮಕರಣ ಮಾಡಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


