ನ್ಯಾಯುಮೂರ್ತಿ ವೀರಪ್ಪ ಅವರು ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ನಿರ್ಮಾಣ ಮಾಡಿದ್ದಾರೆ.ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಶ್ರದ್ಧೆ, ಕೃತಿ, ಆತ್ಮಸಾಕ್ಷಿ ಹಾಗೂ ಅನುಭವದ ಗುಣಗಳನ್ನು ವೀರಪ್ಪ ಅವರು ಹೊಂದಿದ್ದಾರೆ.ಅನುಭವದ ಜತೆಗೆ ಆತ್ಮಸಾಕ್ಷಿಯಿಂದ ತೀರ್ಪು ನೀಡಿ ಸಮಾಜದ ಹೃದಯ ಗೆದ್ದಿದ್ದಾರೆ.ವೀರಪ್ಪ ಅವರು ಜೈಲಿಗೆ ಹೋಗಿ ಖೈದಿಗಳ ಜತೆ ಊಟ ಮಾಡಿ ಅವರ ಹೇಳಿದ್ದನ್ನು ನೋಡಿದ್ದೇವೆ.ಮನಪರಿವರ್ತನೆ ಮಾಡಿದ್ದನ್ನೂ ನೋಡಿದ್ದೇವೆ. ಜತೆಗೆ ಅಲ್ಲಿ ಖೈದಿಗಳ ಬಳಿ ‘ನಿಮ್ಮನ್ನು ನೋಡಿ ವಿಧಾನಸೌಧದಲ್ಲಿರುವವರು ಕಲಿಯುವುದಿದೆ’ ಎಂದು ನಾವು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ,ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ,ಅರ್ಜುನನ ಗುರಿ, ಭೀಮನ ಬಲ, ವಿಧುರನ ನೀತಿ ಹಾಗೂ ಕೃಷ್ಣನ ತಂತ್ರ ಇರಬೇಕು. ಇದೆಲ್ಲವೂ ವೀರಪ್ಪ ಅವರಲ್ಲಿದೆ. ಅದಕ್ಕೆ ಅವರು ಯಶಸ್ಸು ಸಾಧಿಸಿದ್ದಾರೆ.
ವೀರಪ್ಪ ಅವರು ತಮ್ಮಜೀವನದಲ್ಲಿ ಕೊಟ್ಟಿರುವ ತೀರ್ಪುಗಳು ಜನರ ಬಾಳಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ.ಮನುಷ್ಯನ ಹುಟ್ಟು ಆಕಸ್ಮಿಕ,ಸಾವು ಅನಿವಾರ್ಯ.ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯಅವರು ಮಾಡಿದ ಸೇವೆ ಅವರು ಮಂಡಿಸಿದ ವಾದ ಪರಿಗಣಿಸಿ ಅವರನ್ನು ಉನ್ನತ ಸ್ಥಾನಕ್ಕೆ ಕೂರಿಸಲಾಗಿತ್ತು.
ನಾವೆಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾಂಗ ನಾಲ್ಕು ಆಧಾರ ಸ್ತಂಭಗಳು. ಶಾಸಕಾಂಗ ಹಾಗೂ ಕಾರ್ಯಾಂಗ ಏನೇ ತಪ್ಪು ಮಾಡಿದರೂ ಅದನ್ನು ನೋಡಿ ತಿದ್ದಲು ನ್ಯಾಯಾಂಗ ಇದೆ. ಶಾಸಕಾಂಗದ ಎದುರು ನ್ಯಾಯಾಂಗ ಇದೆ. ಪ್ರಜಾಪ್ರತಿನಿಧಿಯಾಗಿ ಹಾಗೂ ಆರೋಪಿಯಾಗಿ ನಾನು ನ್ಯಾಯದ ಪೀಠದಿಂದ ಅನ್ಯಾಯ ಆಗಬಾರದು ಎಂದು ನಂಬಿದ್ದೇನೆ.
ರಕ್ಷಣಾ ಕಾಯ್ದೆ ಜಾರಿ ಕುರಿತು ನೀವು ಬೇಡಿಕೆ ಇಟ್ಟಿದ್ದೀರಿ. ಮುಖ್ಯಮಂತ್ರಿಗಳು ಇಲ್ಲೇ ಇದ್ದಾರೆ.
ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ನಿಮ್ಮಪರವಾಗಿ ಧ್ವನಿಯಾಗಿದ್ದರು. ಈಗ ಅವರ ಕೈಯಲ್ಲಿ ಪೆನ್ನು ಪೇಪರ್ ಎಲ್ಲವೂ ಇದೆ. ಹೀಗಾಗಿ ನಿಮ್ಮಬೇಡಿಕೆ ಈಡೇರಲಿದೆ.ನಾವು ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದಿದ್ದೇವೆ.ನಾವು ನುಡಿದಂತೆ ನಡೆಯಲು ಅವಕಾಶ ಸಿಕ್ಕಿದೆ. ನಿಮ್ಮಆಚಾರ ವಿಚಾರಗಳು ನಮ್ಮಪರವಾಗಿ ಇರಲಿ.
ನಾವು ಬಸವಣ್ಣ, ಕುವೆಂಪು, ಶಿಶುನಾಳ ಶರೀಫರ, ಕನಕದಾಸರ ನಾಡಿನಲ್ಲಿದ್ದೇವೆ. ಈ ನಾಡಿನ ಇತಿಹಾಸ ಉಳಿಸಬೇಕು. ಇಡೀ ವಿಶ್ವವೇ ಬೆಂಗಳೂರಿನ ಮೂಲಕ ದೇಶವನ್ನು ನೋಡುತ್ತಿದೆ.ಬೆಂಗಳೂರು ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ನ್ಯಾಯ ವ್ಯವಸ್ಥೆ ಹೊಂದಿದೆ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಲಾ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿರುವ ನ್ಯಾಯಾಧೀಶರು ಯಾವ ಎತ್ತರದ ಸ್ಥಾನಕ್ಕೆ ಹೋಗುತ್ತೀರಿ ಗೊತ್ತಿಲ್ಲ. ದೇವರು ನಮಗೆ ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು.ನಿಮ್ಮೆಲ್ಲರಿಗೂ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿ, ವೀರಪ್ಪ ಸಾಹೇಬರು ಹಾಗೂ ಇತರೆ ನ್ಯಾಯಾಧೀಶರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


