ಚಾಮರಾಜನಗರ: ಪ್ರತಿಕೂಲ ವಾತಾವರಣದಿಂದಾಗಿ ವಾಯುಸೇನೆಯ ಕಿರಣ್ ಏರ್ ಪಥ್ U692 ವಿಮಾನ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪತನಗೊಂಡಿದೆ.
ಇದೊಂದು ತರಬೇತಿ ವಿಮಾನವಾಗಿದ್ದು ಭೂಮಿಕಾ ಹಾಗೂ ತೇಜ್ ಪಾಲ್ ಎಂಬವರು ಈ ವಿಮಾನವನ್ನು ಚಲಾಯಿಸುತ್ತಿದ್ದರು. ಪ್ಯಾರಚೂಟ್ ಮೂಲಕ ಇಬ್ಬರೂ ತಮ್ಮನ್ನು ಬಚಾವ್ ಮಾಡಿಕೊಂಡಿದ್ದು ವಿಮಾನ ಪತನಗೊಂಡ 2 ಕಿಮಿ ದೂರದಲ್ಲಿ ಇಬ್ಬರು ಬಿದ್ದಿದ್ದರು.
ಸದ್ಯ, ಇಬ್ಬರನ್ನು ವಾಯುಸೇನೆಯವರು ಪತ್ತೆಹಚ್ಚಿ ರಕ್ಷಣೆ ಮಾಡಿದ್ದು ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಕರೆದೊಯ್ದಿದ್ದಾರೆ. ಇಬ್ಬರಿಗೂ ಕುತ್ತಿಗೆ ಬಳಿ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


