ತುರುವೇಕೆರೆ: ತಾಲೂಕಿನ ದಂಡಿನ ಶಿವರ ಹೋಬಳಿಯ ಕುರುಬರಹಳ್ಳಿ ಕೊಪ್ಪ ಗ್ರಾಮದ ನಿವಾಸಿಯಾದ ಪಂಕಜ ಕೋಂ ಲೇಟ್ ಸಿದ್ದರಾಮಯ್ಯ ಎಂಬ ಮಹಿಳೆಯ ಮೇಲೆ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಒಂಟಿ ಮಹಿಳೆಯ ಮೇಲೆ ದ್ವಿಚಕ್ರ ವಾಹನ ಸಮೇತ ನೆಲಕ್ಕೆ ಕೆಡವಿ ಮನಬಂದಂತೆ ಹಲ್ಲೆ ನಡೆಸಲಾಗಿದೆ.
ಶಿವಣ್ಣ, ಚಂದ್ರು. ಮಂಗಳ ಗೌರಮ್ಮ, ಜಯಂತ್, ಪೂಜಾ ಹಾಗೂ ರವಿ ಇವರು ಪಂಕಜ ಎಂಬವರ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳು ಎನ್ನಲಾಗಿದೆ. ಸದ್ಯ ಹಲ್ಲೆಗೊಳಗಾದ ಮಹಿಳೆಯು ತುರುವೇಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA