ಕೆಎಸ್ಆರ್ ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ನಡೆದಿದೆ. ಹೆಬ್ಬಾಳ ಬಳಿಯ ಕೆಂಪಾಪುರ ನಿವಾಸಿ ಲತಾ ಎಂಬಾಕೆ ಮೃತಪಟ್ಟವರು.
ಎರಡು ಬೈಕ್‌ಗಳಲ್ಲಿ ಕುಟುಂಬಸ್ಥರು ಬೈಕ್‌ನಲ್ಲಿ ಬಂದಿದ್ದು, ಒಂದು ಬೈಕ್‌ನಲ್ಲಿ ಪತಿ ಜತೆ ಲತಾ ಪ್ರಯಾಣಿಸುತ್ತಿದ್ದರು. ಸಂಗೊಳ್ಳಿ ರಾಯಣ್ಣ ಮೇಲ್ವೇತುವೆಯಿಂದ ಇಳಿಯುವ ವೇಳೆ ವೇಗವಾಗಿ ಬಲಕ್ಕೆ ಬಂದಿರುವ ಬಸ್ ನ ಹಿಂಭಾಗ ದ್ವಿಚಕ್ರ ವಾಹನಕ್ಕೆ ತಾಗಿದ್ದು, ಇಬ್ಬರೂ ಬಿದ್ದಿದ್ದರು. ಆಗ ಲತಾ ಮೇಲೆ ಬಸ್ ಸಾಗಿ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನೊಂದು ದ್ವಿಚಕ್ರ ವಾಹನದಲ್ಲಿ ಪುತ್ರಿ ಪ್ರಯಾಣಿಸುತ್ತಿದ್ದಳು. ಪತಿ ಹಾಗೂ ಪುತ್ರಿಯ ಎದುರೇ ಲತಾ ಸಾವಿಗೀಡಾದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


