ವಿಶ್ವ ಪರಿಸರ ದಿನಾಚರಣೆ ಸಸಿ ನೆಡುವ ಮೂಲಕ ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಅರಣ್ಯ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಬೆಳಗಾವಿ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿಗಳು ಮಂಜುನಾಥ್ ಚೌವಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಳಗಾವಿ ಹರ್ಷ ಬಾನು ಇವರು ಉಪಸ್ಥಿತಿಯಲ್ಲಿ ಬೆಳಗಾವಿ ಕೋರ್ಟ್ ಆವರಣದಲ್ಲಿ ಸಸಿ ನೆಡಲಾಯಿತು.
ಸಾಮಾಜಿಕಾ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಖಾನಾಪುರ ಹಾಗೂ ಬೆಳಗಾವಿ ವಲಯಗಳ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗಳು ಹಾಗೂ ಸಂಘ ಸಂಸ್ಥೆಗಳ ಉಪಸ್ಥಿತಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರದ ಸಂರಕ್ಷಣೆ ಹಾಗೂ ಜನರ ಸಹಭಾಗಿತ್ವದದಿಂದ ಅರಣ್ಯ ಸಂರಕ್ಷಣೆ ನಮ್ಮ ಹೊಣೆ ಎಂದು ಅರಣ್ಯ ಇಲಾಖೆ ಸಂದೇಶ ಸಾರಿತು.
ಈ ಸಂದರ್ಭದಲ್ಲಿ ಖಾನಾಪುರ ಎಸಿಎಫ್ ಸಂತೋಷ್ ಚವಾನ , RFO ಕವಿತಾ ಈರನಟ್ಟಿ, ನಾಗರಾಜ್ ಬಾಳೆಹೊಸೂರ, ಉಪ ವಲಯ ಅರಣ್ಯ ಅಧಿಕಾರಿಗಳಾದ ಆರ್ ಎಂ ಬೀಡಿಕರ, ವಿನಾಯಕ ಪಾಟೀಲ್, ಅರಣ್ಯ ರಕ್ಷಕರಾದ ಪುಂಡ್ಲಿಕ್ ಪಮ್ಮಾರ, ಶಿವಾನಂದ ಅವರಾದಿ ವಿವಿಧ ಸಂಘ ಸಂಸ್ಥೆಗಳು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


