ಜನಪ್ರಿಯ ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್ ಅವರು ತುಮಕೂರಿನಿಂದ ವರ್ಗಾವಣೆಯಾಗಿದ್ದು, ಕೃಷಿ ಆಯುಕ್ತರಾಗಿ ನಿಯೋಜನೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ತಂಡದ ಸದಸ್ಯರು ವೈ.ಎಸ್.ಪಾಟೀಲ್ ಅವರನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಹಾರೈಸಿದರು.
ನೊಂದವರ ಧ್ವನಿಯಾಗಿದ್ದ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್ ಅವರು, ಅನೇಕ ವಸತಿ ನಿವೇಶನ ರಹಿತರಿಗೆ ನಮ್ಮ ತಂಡದ ಮನವಿಯ ಮೇರೆಗೆ ಭೂಮಿ ಮಂಜೂರು ಮಾಡಿ ನಿವೇಶನ ಕೊಡಿಸಿ ಅವರಿಗೆ ಆಶ್ರಯದಾತರಾಗಿದ್ದರು ಎಂದು ಸಮಿತಿಯ ಮುಖಂಡರು ನೆನಪಿಸಿಕೊಂಡರು.

ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ಜಿಲ್ಲೆಯ ಜನರ ಪ್ರಾಣ ರಕ್ಷಿಸುವಲ್ಲಿ ಮುಂದಾಳಾಗಿದ್ದರು. ಹೀಗೆ ಬಡವರ ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡಿ ಜಿಲ್ಲಾಧಿಕಾರಿಗಳು ಜನಾನುರಾಗಿಯಾಗಿದ್ದರು. ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಕೂರದೆ ಜನರ ಕಷ್ಟಗಳಿಗೆ ಸ್ಪಂದಿಸುತ್ತ ಜನಸಾಮಾನ್ಯರೊಂದಿಗೆ ಸೇರಿ ಅವರಿಗೆ ಜನಪರ ಸೇವೆ ಮಾಡಿ ಅಸಾಮಾನ್ಯ ಜಿಲ್ಲಾಧಿಕಾರಿಗಳಾಗಿದ್ದರು ಎಂದು ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದೆಯೂ ಇವರ ಸೇವಾ ಕೈಂಕರ್ಯ ಹೀಗೆ ಮುಂದುವರೆಯಲಿ ಮತ್ತು ಇವರ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಸಮಿತಿ ಹಾರೈಸಿದೆ.
ವರದಿ: ಶಿವಕುಮಾರ್, ಮೇಷ್ಟ್ರುಮನೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


