ಈಗಾಗಲೇ ಸಿಎಂ ಗೃಹಜ್ಯೋತಿ ಯೋಜನೆ ಬಗ್ಗೆ ವಿಸ್ಕೃತವಾಗಿ ತಿಳಿಸಿದ್ದಾರೆ. 200 ಯೂನಿಟ್ ವರೆಗೆ ಪ್ರತಿಯೊಬ್ಬರಿಗೆ ಉಚಿತವಾಗಿ ವಿದ್ಯುತ್ ಕೊಡುವ ಯೋಜನೆ ಇದಾಗಿದೆ. ಗೃಹಬಳಕೆಯ ಗ್ರಾಹಕರ ಒಂದು ವರ್ಷದ ಸರಾಸರಿ ತೆಗೆದುಕೊಂಡು 10% ಸೇರಿಸಿ ವಿದ್ಯುತ್ ಉಚಿತ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಗ್ಯಾರಂಟಿಗೆ ಜನತೆಯಲ್ಲಿ ಹಲವು ಗೊಂದಲಗಳು ಉಳಿದುಕೊಂಡಿವೆ. ಈ ಎಲ್ಲಾ ಗೊಂದಲಗಳಿಗೆ ತೆರೆಎಳೆಯಲು ಇಂಧನ ಸಚಿವ ಕೆಜೆ ಜಾರ್ಜ್ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಗೃಹಜ್ಯೋತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಜನರು ಆಧಾರ್ ಕಾರ್ಡ್ ಅನ್ನು ಆರ್ ಆರ್ ನಂಬರ್‌ಗೆ ಲಿಂಕ್ ಮಾಡಬೇಕು. ವಾಸದ ಕರಾರು ಪತ್ರ ಅಥವಾ ವೋಟರ್ ಐಡಿ ನೀಡಬೇಕು. ಬಾಡಿಗೆ ಮನೆಯವರಿಗೂ, ಸ್ವಂತ ಮನೆಯವರಿಗೂ ಇದು ಅನ್ವಯಿಸುತ್ತದೆ. ಬೆಂಗಳೂರು ಒನ್ ಸೇವಾಕೇಂದ್ರದಲ್ಲಿ ಈ ವ್ಯವಸ್ಥೆಯನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಜೂನ್ 15 ರಿಂದ ನೋಂದಣಿ ಆರಂಭವಾಗಿ, ಆಗಸ್ಟ್ 1 ರಿಂದ ಯೋಜನೆ ಜಾರಿಗೆ ಬರಲಿದೆ. 2 ಕೋಟಿ 16 ಲಕ್ಷ ಗೃಹಬಳಕೆ ಗ್ರಾಹಕರು ಇದ್ದಾರೆ. ಅದರಲ್ಲಿ 2 ಕೋಟಿ 14 ಲಕ್ಷ ಗ್ರಾಹಕರು 200 ಯೂನಿಟ್ ಒಳಗೆ ಬಳಕೆ ಮಾಡುವವರು ಇದ್ದಾರೆ. 2 ಲಕ್ಷ ಮಾತ್ರ 200 ಯೂನಿಟ್ ಗೂ ಹೆಚ್ಚು ವಿದ್ಯುತ್ ಬಳಕೆ ಮಾಡುವವರು ಇದ್ದಾರೆ. ಅದರಲ್ಲಿ 53 ಯೂನಿಟ್ ಅತಿ ಹೆಚ್ಚು ಬಳಕೆ ಮಾಡುವವರು ಇದ್ದಾರೆ ಎಂದು ಹೇಳಿದರು.
200 ಯೂನಿಟ್ ಒಳಗೆ ಇದ್ದರೂ ಹೆಚ್ಚುವರಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಆದರೆ ಫಿಕ್ಸ್ಡ್ ಚಾರ್ಜ್ ಇರಲ್ಲ. ಸರಾಸರಿ ಬಳಕೆಯ 10% ಹೆಚ್ಚುವರಿ ಆದ ಬಳಿಕದ ಹೆಚ್ಚುವರಿ ಯೂನಿಟ್ ಗೆ 9% ಟ್ಯಾಕ್ಸ್ ಬೀಳುತ್ತದೆ. ಪ್ರತಿ ತಿಂಗಳ ಸರಾಸರಿ ಮೀರಿದರೆ ಹೆಚ್ಚುವರಿ ಯೂನಿಟ್ ನ ಹಣ ಕಟ್ಟಬೇಕು. 200 ಯೂನಿಟ್ ಮೇಲ್ಪಟ್ಟ ಬಳಕೆದಾರರು ಮುಂದಿನ ವರ್ಷ ಏನಾದರೂ ಕಡಿಮೆ ಬಳಕೆ ಮಾಡಿದರೆ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


